ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಂದ ನಡೆಯಿತು ಸೂರ್ಯೋಪಾಸನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಥಸಪ್ತಮಿ ವಿಶೇಷ ದಿನ ಶನಿವಾರ ಬೆಳಗ್ಗೆ ವಿದ್ಯಾರ್ಥಿಗಳಿಂದ ಸೂರ್ಯೋಪಾಸನೆ ನಡೆಯಿತು. 5ನೇ ತರಗತಿಯಿಂದ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಶಾಲಾ ಅಂಗಳದಲ್ಲಿ ಭಗವಾನ್ ಸೂರ್ಯದೇವನ ಮಂತ್ರಗಳನ್ನು ಪಠಿಸಿದರು.

ಸರ್ವರೋಗ ನಿವಾರಕನೂ, ವಿದ್ಯಾಬುದ್ಧಿ ತೇಜಸ್ಸನ್ನು ವೃದ್ಧಿಗೊಳಿಸುವ ಭಾಸ್ಕರನಿಗೆ ಹದಿಮೂರು ಮಂತ್ರಗಳನ್ನು ಪಠಿಸುತ್ತಾ ಸೂರ್ಯನಮಸ್ಕಾರ ಕೈಗೊಂಡರು.

ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳು ವಿಶೇಷ ಆಸಕ್ತಿಯಿಂದ ಪ್ರತ್ಯಕ್ಷದರ್ಶಿಗಳಾದರು. ಶಾಲಾ ಅಧ್ಯಾಪಕ ವೃಂದದ ಪೂರ್ಣ ಸಹಕಾರದೊಂದಿಗೆ ಯೋಗ ಶಿಕ್ಷಕ ವಿನಯಪಾಲ್ ಇವರ ನಿರ್ದೇಶನದಲ್ಲಿ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

ಸಂಸ್ಕೃತ ಅಧ್ಯಾಪಿಕೆ ಸುಶ್ಮಾ ನೂಜಿ ಪ್ರಾರ್ಥನಾಶ್ಲೋಕ ಪಠಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯರು ದಿನವಿಶೇಷತೆಯ ಮಹತ್ವವನ್ನುತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!