Monday, October 2, 2023

Latest Posts

ʻಭಾರತದ ಸಮಸ್ಯೆಗಳಲ್ಲಿ ಮಧ್ಯಪ್ರವೇಶಿಸುವಂತೆ ಜಗತ್ತನ್ನು ಕೇಳಿಕೊಳ್ಳುವುದು ಅತ್ಯಂತ ಕಳವಳಕಾರಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಜಾಪ್ರಭುತ್ವದಲ್ಲಿ ವಾದಗಳು ಸಮಸ್ಯೆಯಲ್ಲ, ಆದರೆ ನಾಯಕರು ಭಾರತದಿಂದ ಹೊರಗೆ ಹೋದಾಗ ಮತ್ತು ಹೊರಗಿನ ಜನರನ್ನು ಬಂದು ಮಧ್ಯಪ್ರವೇಶಿಸುವಂತೆ ಆಹ್ವಾನಿಸುವುದು ನಿಜಕ್ಕೂ ಕಳವಳಕಾರಿ ವಿಷಯ, ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಸರ್ಕಾರದ ವಿರುದ್ಧದ ಟೀಕೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ತಿರುಗೇಟು ನೀಡಿದರು.

“ಯಾವುದೇ ಪ್ರಜಾಪ್ರಭುತ್ವದಲ್ಲಿ, ವಾದಗಳು ಇರುತ್ತವೆ, ಭಿನ್ನಾಭಿಪ್ರಾಯಗಳಿರುತ್ತವೆ, ವೈವಿಧ್ಯತೆ ಮತ್ತು ಅಭಿಪ್ರಾಯಗಳು ಇರುತ್ತವೆ. ಅದು ಇರಬೇಕುಕೂಡ, ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಭಾರತದ ಸಮಸ್ಯೆಯನ್ನು ಜಗತ್ತಿನಲ್ಲಿ ತೆರೆದುಕೊಂಡಾಗ ಅದಷ್ಟೇ ಸಾಲದಂತೆ ಹೊರಗಿನವರು ಬಂದು ಹಸ್ತಕ್ಷೇಪ ಮಾಡುವಂತೆ ಆಹ್ವಾನಿಸುವುದು ದುರದೃಷ್ಟಕರ” ಎಂದರು.

ಅಮೆರಿಕದ ಆರು ದಿನಗಳ ಮೂರು ನಗರಗಳ ಪ್ರವಾಸದಲ್ಲಿ ರಾಹುಲ್ ಗಾಂಧಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಟೀಕಿಸಿದ್ದಕ್ಕೆ ಜೈ ಶಂಕರ್‌ ಪ್ರತ್ಯತ್ತರ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!