Sunday, December 4, 2022

Latest Posts

ಆಸ್ರಣ್ಣರ ಮನೆ ದರೋಡೆಯ ಪ್ರಮುಖ ಆರೋಪಿ ಮದ್ಯಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ವಾಸುದೇವ ಆಸ್ರಣ್ಣ ಅವರ ಮನೆ ದರೋಡೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಎಕ್ಕಾರು ನಿವಾಸಿ ಸುಧೀರ್ ಭಟ್ ಮದ್ಯಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ನಿಧನರಾಗಿದ್ದಾರೆ.
2006 ರ ಅಕ್ಟೋಬರ್ 4ರಂದು ಮಧ್ಯರಾತ್ರಿಯ ಸಮಯ ಗಿಡಿಗೆರೆಯಲ್ಲಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಆಸ್ರಣ್ಣರ ಮನೆಗೆ ನುಗ್ಗಿದ್ದ ಸುಮಾರು ಎಂಟು ಮಂದಿ ದರೋಡೆಕೋರರ ತಂಡ ಮಾರಾಕಾಸ್ರ್ರಗಳನ್ನು ತೋರಿಸಿ ಮನೆಮನೆಯಲ್ಲಿದ್ದವರನ್ನು ಬೆದರಿಸಿ ನಗ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಹಲವು ಆರೋಪಿಗಳಲ್ಲಿ ಸುಧೀರ್ ಭಟ್ ಕೂಡ ಒಬ್ಬನಾಗಿದ್ದ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!