ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಸೋಕೆ ಸೀಟ್ ಸಿಕ್ರೆ ಸಾಕು, ಬ್ಯಾಗ್ನಿಂದ ಏನಾದ್ರೂ ಸ್ನ್ಯಾಕ್ಸ್ ತೆಗೆದು ಪ್ರಯಾಣಿಕರು ತಿನ್ನುತ್ತಾರೆ, ಹಲವರು ಟೈಮ್ಪಾಸ್ಗೆಂದೇ ಸ್ನ್ಯಾಕ್ಸ್ ತಿನ್ನುತ್ತಾ ಕೂರುತ್ತಾರೆ.
ಆದರೆ ಮೆಟ್ರೋಗಳಲ್ಲಿ ಯಾವುದೇ ಆಹಾರವನ್ನು ತಿನ್ನುವಂತಿಲ್ಲ, ಮಕ್ಕಳು ಕೂಡ ಮೆಟ್ರೋ ಸ್ಟೇಷನ್ ದಾಟಿದ ನಂತರ ಸ್ನ್ಯಾಕ್ಸ್ ತಿಂತಾರೆ. ಆದರೆ ನಮ್ಮ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಗೋಬಿ ತಿಂದಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಸೌತ್ ಎಂಡ್ ಸರ್ಕಲ್ ಮೆಟ್ರೋದಲ್ಲಿ ಪ್ರಯಾಣಿಕನೊಬ್ಬ ಗೋವಿ ತಿನ್ನುತ್ತಾ ಕುಳಿತಿದ್ದು, ಆತನ ಸ್ನೇಹಿತರೇ ವಿಡಿಯೋ ಮಾಡಿದ್ದಾರೆ. ರೂಲ್ಸ್ ಬ್ರೇಕ್ ಮಾಡುತ್ತಿದ್ದೀನಿ ಎಂದು ಆತನಿಗೆ ಗೊತ್ತಿದೆ, ಆತ ವಿಡಿಯೋಗೆ ನಗುತ್ತಿದ್ದಾನೆ. ಈ ರೀತಿ ರೂಲ್ಸ್ ಬ್ರೇಕ್ ಮಾಡೋಕೆ ಬಿಟ್ರೆ ಮೆಟ್ರೋ ಸ್ಟೇಷನ್ ಕೂಡ ಬಸ್ಸ್ಟಾಂಡ್ ರೀತಿ ಕಾಣಿಸುತ್ತದೆ ಅನ್ನೋದು ನೆಟ್ಟಿಗರ ಅಭಿಪ್ರಾಯ