ಹೊಸದಿಗಂತ ವರದಿ, ಧಾರವಾಡ
ಪಂಚರಾಜ್ಯ ಚುನಾವಣೆ ಫಲಿತಾಶದ ಪೈಕಿ ನಾಲ್ಕು ರಾಜ್ಯದಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಧಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವೆರು, ಉತ್ತರ ಪ್ರದೇಶ, ಗೋವಾ, ಮಣಿಪುರ ಸೇರಿ ನಾಲ್ಕರಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ. ಪಂಜಾಬ್ ನಲ್ಲಿ ಮಾತ್ರ ಸ್ವಲ್ಪ ಹಿನ್ನಡೆ ಅಗಲಿದೆ ಎಂದು ತಿಳಿಸಿದರು.
ಪಂಜಾಬ್ ನಲ್ಲಿ ಬಿಜೆಪಿ ಪ್ರಭಾವ ಕಡಿಮೆ ಆಗಿಲ್ಲ. ಆದರೆ, ಕೆಲ ಬದಲಾದ ಪರಿಸ್ಥಿತಿಯಿಂದ ಕಡಿಮೆ ಸ್ಥಾನ ಗೆಲ್ಲಬಹುದು. ದೇಶ ಹಾಗೂ ವಿವಿಧ ರಾಜ್ಯದಲ್ಲಿ ಜನಪರ ಸರ್ಕಾರ ನೀಡುವುದು ಬಿಜೆಪಿ ಧ್ಯೇಯ ಎಂದು ಹೇಳಿದರು.
ಪಂಜಾಬ್ ರಾಜ್ಯದಲ್ಲಿ ಎಎಪಿ ಗೆದ್ದರೂ, ಈ ಪಕ್ಷಕ್ಕೆ ನಿರ್ಧಿಷ್ಟ ವಿಚಾರಧಾರೆ ಇಲ್ಲ. ಆ ಪಕ್ಷಕ್ಕೆ ಭವಿಷ್ಯವೇ ಇಲ್ಲ.. ಅಲ್ಲಿ ಎಎಪಿ ಇದೇ ಮೊದಲ ಹಾಗೂ ಕೊನೆ ಸಲ ಅಧಿಕಾರ ಹಿಡಿಯಲಿದೆ ಎಂದರು. ಇನ್ನೂ ಈ ಪಂಚರಾಜ್ಯ ಚುನಾವಣೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲ. ನಮಗೆ ಜನರ ಮೇಲೆ ವಿಶ್ವಾಸವಿದೆ. ಪುನಃ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ