PSI ಹುದ್ದೆ ಕೊಡಿಸುವುದಾಗಿ 21 ಲಕ್ಷ ವಂಚನೆ: ಆರೋಪಿ ಅರೆಸ್ಟ್

ಹೊಸ ದಿಗಂತ ವರದಿ, ಚಿಕ್ಕಬಳ್ಳಾಪುರ:

ಪಿಎಸ್‍ಐ ಹುದ್ದೆ ಕೊಡಿಸುವುದಾಗಿ ವಂಚನೆ ಮಾಡಿದ ಆರೋಪಿ ನವೀನ್ ಧಳಬಂಜನ್ ಎಂಬ ವ್ಯಕ್ತಿಯನ್ನು ಬಾಗೇಪಲ್ಲಿ ಪೊಲೀಸರು ಬಂದಿಸಿದ್ದಾರೆ.
ಹುಬ್ಬಳ್ಳಿ ಮೂಲದ ನವೀನ್ ಧಳಬಂಜನ್‍ ಪಿಎಸ್ ಐ ಕೆಲಸ ಕೊಡಿಸುವುದಾಗಿ ಹಣ ಪಡೆದ ವಂಚಸಿದ್ದಾನೆ ಎಂಬ ಆರೋಪದ ಮೇರೆಗೆ ಬಾಗೇಪಲ್ಲಿ ಪೊಲೀಸರು ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ.
ರಾಜ್ಯದಲ್ಲಿ ಪಿಎಸ್‍ಐ ಹುದ್ದೆಗಳ ಅಕ್ರಮ ನೇಮಕಾತಿ ಪ್ರಕರಣ ಬಯಲಿಗೆ ಬಂದಿದ್ದು, ದಿನದಿಂದ ದಿನಕ್ಕೆ ಹೊಸ, ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳ ಸಮೇತ ಹಲವರ ಬಂಧನ ಆಗಿದ್ದು ತನಿಖೆ ಮುಂದುವೆರಿದಿದೆ.
ಈ ನಡುವೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ನಿವೃತ್ತ ಶಿಕ್ಷಕ ಸತ್ಯನಾರಾಯಣರೆಡ್ಡಿ ಅವರ ಮಗ ಕಿರಣ್ 2019ರಲ್ಲಿ 300 ಮಂದಿ ಪಿಎಸ್‍ಐಗಳ ನೇಮಕಾತಿ ವೇಳೆ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಆದರೆ ಈ ವೇಳೆ ಸತ್ಯನಾರಾಯಣ ಸ್ನೇಹಿತ ಜಯರಾಮರೆಡ್ಡಿ ಮೂಲಕ ಪರಿಚಯವಾದ ಹುಬ್ಬಳ್ಳಿ ಮೂಲದ ನವೀನ್ ಧಳಬಂಜನ್ ನಿಮ್ಮ ಮಗನಿಗೆ ನಾನು ಪಿಎಸ್‍ಐ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ ಹಂತ, ಹಂತವಾಗಿ ಸತ್ಯನಾರಾಯಣರೆಡ್ಡಿ ಬಳಿ 21 ಲಕ್ಷದ 20 ಸಾವಿರ ರೂಪಾಯಿ ಪಡೆದಿದ್ದಾನೆ.
ನಂತರ 21 ಲಕ್ಷ ಹಣ ಪಡೆದ ಆರೋಪಿ ನವೀನ್ ಧಳವಂಜನ್ ಕೆಲಸ ಕೊಡಿಸದ ಹಿನ್ನೆಲೆ ಸತ್ಯನಾರಾಯಣರೆಡ್ಡಿ ದುಡ್ಡು ವಾಪಾಸ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಈಗ ಕೊಡುತ್ತೇನೆ ಆಗ ಕೊಡುತ್ತೇನೆ ಎಂದು ಕಥೆ ಹೇಳಿ ಕಾಗೆ ಹಾರಿಸುತ್ತಿದ್ದ ನವೀನ್ ವಿರುದ್ಧ ಕೊನೆಗೆ ಬಾಗೇಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದರು.
ದೂರಿನನ್ವಯ ಇದೀಗ ಪೊಲೀಸರು ನವೀನ್ ಧಳಬಂಜನ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಪಡೆದ ಹಣದಲ್ಲಿ ಶೋಕಿ ಮಾಡಿ ಖರ್ಚು ಮಾಡಿರುವುದಾಗಿ ಹೇಳಿದ್ದಾನೆ. ಸದ್ಯ ಆರೋಪಿ, ಸತ್ಯನಾರಾಯಣರೆಡ್ಡಿಗೆ ಮಾತ್ರ ಮೋಸ ಮಾಡಿದ್ದಾನೆಯೇ ಇಲ್ಲದೇ ಬೇರೆ ಯಾರಿಗಾದರೂ ಮೋಸ ಮಾಡಿದ್ದಾನೆಯೇ ಎಂದು ತನಿಖೆ ನಡೆಸಲಾಗುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!