ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ನೀಡಲಾದ ಕೋವಿಶೀಲ್ಡ್ ಲಸಿಕೆ ಅಪಾಯಕಾರಿ ಅಡ್ಡಪಡಿಣಾಮ ಹೊಂದಿದೆ ಎಂಬ ದೂರುಗಳ ಬೆನ್ನಿಗೇ ಯೂರೋಪ್‌ನಲ್ಲಿ ವ್ಯಾಕ್ಸ್ ಝೆವ್ರಿಯ ಹೆಸರಿನಲ್ಲಿ ನೀಡಲಾದ ಅಸ್ಟ್ರಝೆನೆಕಾದ ಇದೇ ಲಸಿಕೆ, ಅಲ್ಲಿನ ಅಧ್ಯಯನಗಳಲ್ಲಿ ಕೂಡಾ ಮಾರಣಾಂತಿಕ ರಕ್ತ ಹೆಪ್ಪುಗಟ್ಟುವಿಕೆ ಸಾಧ್ಯತೆಯನ್ನು ಸ್ಪಷ್ಟಪಡಿಸಿದೆ.
ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾಲಯ ಹಾಗೂ ಇನ್ನು ಕೆಲವು ಅಂತಾರಾಷ್ಟ್ರೀಯ ತಜ್ಞರು ನಡೆಸಿರುವ ಅಧ್ಯಯನದಲ್ಲಿ ಈ ಅಂಶ ಕಂಡು ಬಂದಿದೆ. ಇದೇ ವೇಳೆ ವಿಐಟಿಟಿ ಎಂದು ಕರೆಯಲ್ಪಡುವ ಈ ಸಮಸ್ಯೆ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಅಧ್ಯಯನ ಹೇಳಿದೆ.
ತನ್ನ ಲಸಿಕೆಯು ಟಿಟಿಎಸ್ ಸೇರಿದಂತೆ ಕೆಲವು ವಿರಳ ಅಡ್ಡ ಪರಿಣಾಮಗಳನ್ನು ಹೊಂದಿರುವುದನ್ನು ಒಪ್ಪಿಕೊಂಡಿದ್ದ ಅಸ್ಟ್ರಝೆನೆಕಾ, ಹಲವಾರು ಜಾಗತಿಕ ಮಾರುಕಟ್ಟೆಗಳಿಂದ ತನ್ನ ಲಸಿಕೆಯನ್ನು ಹಿಂಪಡೆದಿತ್ತು.