ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಮ್ಮೆ ಜಾತಗಳನ್ನು ನಂಬದವರು ಕೂಡ ಅದನ್ನು ನಂಬಬೇಕಾಗುತ್ತದೆ. ನಟಿ ಸೌಂದರ್ಯಾ ತನ್ನ ಕರಿಯರ್‌ನ ಪೀಕ್‌ನಲ್ಲಿದ್ದಾಗ ವಿಮಾನ ಅಪಘಾತದಲ್ಲಿ ಮೃತಪಟ್ಟರು. ಇಡೀ ದೇಶವೇ ಅವರ ಸಾವಿಗೆ ಮರುಗಿತ್ತು.
ನಟಿ ಸೌಂದರ್ಯಾ ಬಗ್ಗೆ ಅವರ ಕುಟುಂಬ ನಂಬುವ ಜ್ಯೋತಿಷಿಯೊಬ್ಬರು ಇಂಡೈರೆಕ್ಟ್ ಆಗಿ ಅವರ ಸಾವಿನ ಬಗ್ಗೆ ಹೇಳಿದ್ದರಂತೆ. ನಟಿ ಸೌಂದರ್ಯಾಗೆ ರಾಷ್ಟ್ರೀಯ ಮನ್ನಣೆ ಸಿಗುತ್ತದೆ. ಆಕೆ ದೊಡ್ಡ ದೊಡ್ಡ ನಟರ ಜೊತೆ ಆಕ್ಟ್ ಮಾಡುತ್ತಾರೆ. ಆದರೆ ಹತ್ತು ವರ್ಷದ ನಂತರ ಇದೆಲ್ಲವೂ ನಿಲ್ಲುತ್ತದೆ ಎಂದು ಅವರು ಹೇಳಿದ್ದರಂತೆ!
ಮದುವೆಯಾಗಿ ಗರ್ಭಿಣಿಯಾಗಿದ್ದ ಸೌಂದರ್ಯಾ ಮಗುವಾದ ನಂತರ ಸಿನಿಮಾ ಫೀಲ್ಡ್ ಇಷ್ಟಪಡುವುದಿಲ್ಲ ಎನಿಸುತ್ತದೆ ಎಂದು ಕುಟುಂಬದಲ್ಲಿ ಅಂದುಕೊಂಡಿದ್ದರಂತೆ. ಸೌಂದರ್ಯ ನಿಧನದ ನಂತರ ಕುಟುಂಬದವರು ಜ್ಯೋತಿಷಿಗಳ ಬಳಿ ಹೋಗಿ ನೀವು ಹೇಳಿದ್ದು ಸತ್ಯವಾಗಿ ಹೋಯ್ತು ಎಂದು ದು:ಖಿಸಿದ್ದರಂತೆ.