ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಇಲಿಯಾನ ಡಿಕ್ರೂಸ್ ಇನ್ನೇನು ಕೆಲವೇ ತಿಂಗಳುಗಳಲ್ಲಿ ಮಗುವಿಗೆ ಜನ್ಮನೀಡಲಿದ್ದಾರೆ. ಇಲಿಯಾನ ತಾವು ಪ್ರೆಗ್ನೆಂಟ್ ಎನ್ನುವ ಪೋಸ್ಟ್ ಹಾಕಿದ ನಂತರ ಈ ಪೋಸ್ಟ್ ಸಾಕಷ್ಟು ಸೆನ್ಸೇಷನ್ ಸೃಷ್ಟಿಮಾಡಿತ್ತು. ಇಲಿಯಾನಗೆ ಮದುವೆ ಆಗಿಲ್ಲ ಆದರೂ ಅವರು ಪ್ರೆಗ್ನೆಂಟ್ ಅನ್ನೋ ವಿಷಯ ಹೈಲೈಟ್ ಆಗಿತ್ತು. ಅದರಲ್ಲಿಯೂ ಇಲಿಯಾನ ಮಗುವಿನ ತಂದೆ ಯಾರು ಅನ್ನೋದೇ ದೊಡ್ಡ ಪ್ರಶ್ನೆಯಾಗಿತ್ತು.
ಇದೀಗ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಇಲಿಯಾನ ತಮ್ಮ ಬಾಯ್‌ಫ್ರೆಂಡ್ ಮುಖವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಆದರೆ ಈಗಲೂ ಅವರ ಹೆಸರನ್ನು ಇಲಿಯಾನ ರಿವೀಲ್ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊವನ್ನು ಇಲಿಯಾನ ಅಪ್‌ಲೋಡ್ ಮಾಡಿದ್ದು, ಸೆನ್ಸೇಷನ್ ಕ್ರಿಯೇಟ್ ಮಾಡಿದೆ.