ಮಾಡುವ ವಿಧಾನ
ಮೊದಲು ಕಳಲೆಯನ್ನು ಸಣ್ಣಗೆ ಕತ್ತರಿಸಿ ಇಡಿ, ಅದನ್ನು ನೀರಿನಲ್ಲಿ ಹಾಕಿ ನೆನೆಸಿ ಇಡಿ
ಮೂರು ದಿನಗಳ ನಂತರ ಇದನ್ನು ಬಳಸಬಹುದು, ನೀರನ್ನು ಆಗಾಗ ಬದಲಾಯಿಸಿ
ನಂತರ ಪ್ಯಾನ್‌ಗೆ ಎಣ್ಣೆ ಚಕ್ಕೆ, ಲವಂಗ, ಹಸಿಮೆಣಸು ಹಾಕಿ ಬಾಡಿಸಿ
ನಂತರ ಈರುಳ್ಳಿ, ಟೊಮ್ಯಾಟೊ, ಶುಂಠಿ, ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿ
ನಂತರ ಕೊತ್ತಂಬರಿ ಸೊಪ್ಪು, ಸಾಂಬಾರ್ ಪುಡಿ ಹಾಕಿ ಆಫ್ ಮಾಡಿ
ಇದಕ್ಕೆ ಕಾಯಿ ಸೇರಿಸಿ ರುಬ್ಬಿ ಇಟ್ಟುಕೊಳ್ಳಿ
ಇನ್ನೊಂದು ಕಡೆ ಕಡ್ಲೆಕಾಳು, ಹೆಸರುಕಾಳು ನೆನೆಸಿ ಮೊಳಕೆ ಬರಿಸಿ
ನಂತರ ಕುಕ್ಕರ್‌ನಲ್ಲಿ ಕಳಲೆಗೆ ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ
ನಂತರ ಅದೇ ಕುಕ್ಕರ್‌ಗೆ ಮತ್ತೆ ಎಣ್ಣೆ ಕಳಲೆ, ಕಾಳು ಎಲ್ಲ ಹಾಕಿ ಬಾಡಿಸಿ ಉಪ್ಪು ಹಾಕಿ
ನಂತರ ಅರಿಶಿಣ ಹಾಕಿ ರುಬ್ಬಿದ ಮಸಾಲಾ ಹಾಕಿ ನೀರು ಹಾಕಿ
ಮತ್ತೆ ಎರಡು ವಿಶಲ್ ಹೊಡೆಸಿದ್ರೆ ಪಲ್ಯ ರೆಡಿ