ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಳ್ಗಿಚ್ಚಿಗೆ ಆರು ಮಂದಿ ಬಲಿಯಾಗಿರುವ ಘಟನೆ ಹವಾಯಿಯಲ್ಲಿ ನಡೆದಿದೆ. ಬೆಂಕಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಮಾಯಿ ಕೌಂಟಿ ಮೇಯರ್ ರಿಚರ್ಡ್ ಬಿಸ್ಸೆನ್ ಹೇಳಿದರು. ಹೆಚ್ಚಿನ ಮಾಹಿತಿ ಪ್ರಕಾರ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕ ಹೊರಹಾಕಿದರು.
ಅಮೆರಿಕದ ಹವಾವಯಿಯಲ್ಲಿನ ಕಾಳ್ಗಿಚ್ಚಿಗೆ ಗಾಯಾಳುಗಳ ಸಂಖ್ಯೆಯೂ ಏರಿಕೆಯಾಗಿದೆ. ಆರು ಜನರಲ್ಲಿ ಮೂವರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಮ್ಮ ಮೊದಲ ಆದ್ಯತೆ ಜೀವಗಳನ್ನು ಉಳಿಸುವುದು, ಎರಡನೆಯದು ಆಸ್ತಿಯನ್ನು ಕಪಾಡಿಕೊಳ್ಳುವುದು ಎಂದು ಮೇಯರ್ ಹೇಳಿದರು. ಅಗ್ನಿಶಾಮಕ ಸಿಬ್ಬಂದಿ 24 ಗಂಟೆಗಳಿಂದ ವಿಶ್ರಾಂತಿ ಪಡೆಯದೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಶ್ಚಿಮ ಮೌಯಿ ಮತ್ತು ಅಪ್‌ಕಂಟ್ರಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಪುನಃಸ್ಥಾಪಿಸುವವರೆಗೆ ತಾಳ್ಮೆಯಿಂದ ಇರುವಂತೆ ಮನವಿ ಮಾಡಿದ್ದಾರೆ.