Monday, October 2, 2023

Latest Posts

ರೈತರಿಗೆ ಗುಡ್ ನ್ಯೂಸ್ : ಇಂದಿನಿಂದ ಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲೆನಾಡು ಭಾಗದ ರೈತರಿಗೆ ಗುಡ್‌ನ್ಯೂಸ್ ಸಿಕ್ಕಿದ್ದು, ಮುಂದಿನ ನೂರು ದಿನಗಳ ಕಾಲ ಭದ್ರಾ ಜಲಾಶಯದ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.

ಅಚ್ಚುಕಟ್ಟು ಪ್ರದೇಶದ ಪ್ರಾಧಿಕಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಆಗಸ್ಟ್ 10ರಿಂದ ಭದ್ರಾ ಎಡದಂಡೆ, ಬಲದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೆಬೆನ್ನೂರು ಶಾಖಾ ನಾಲೆ. ಹರಿಹರ ಹಾಗೂ ಗೋಂದಿ ನಾಲೆಗಳಿಗೆ ನೀರು ಬಿಡಲಾಗುವುದು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯ ಒಟ್ಟಾರೆ 186 ಅಡಿ ಇದೆ, ಜಲಾಶಯ ತುಂಬಲು ಇನ್ನೂ 20 ಅಡಿ ನೀರು ಕಡಿಮೆ ಇದೆ. ಪ್ರತಿ ವರ್ಷ ಈ ಸಮಯದಲ್ಲಿ ಜಲಾಶಯ ಭರ್ತಿಯಾಗಿರುತ್ತಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಕಡಿಮೆಯಾಗಿದ್ದು, ಭದ್ರಾ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಜುಲೈನಲ್ಲಿ ಮಳೆ ಚೆನ್ನಾಗಿಯೇ ಬಂದಿದ್ದು, ನಾಲೆಗಳಿಗೆ ನೀರು ಹರಿಸಲು ತಯಾರಿ ನಡೆಸಲಾಗಿದೆ.

ಭದ್ರಾ ಬಲದಂಡೆ ಕಾಲುವೆಗೆ 2650 ಕ್ಯುಸೆಕ್ ಹಾಗೂ ಎಡದಂಡೆಗೆ 380 ಕ್ಯುಸೆಕ್ ನೀರು ಹರಿಸಲು ನಿರ್ಧರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!