ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯ ಐದಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿದೆ. ಈ ಕುರಿತು ದೆಹಲಿ ಪೊಲೀಸರು ಅಲರ್ಟ್ ಆಗಿದ್ದು, ಭಾರತ ವಿರೋಧಿ ಬರಹಗಳನ್ನು ಅಳಿಸುವ ಕೆಲಸ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ದೆಹಲಿ ಪೊಲೀಸರು ʻರಾಜಧಾನಿಯ 5ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ‘ಖಾಲಿಸ್ತಾನ್ ಜಿಂದಾಬಾದ್’ ಬರಹಗಳು ಕಂಡುಬಂದಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇನ್ನೊಂದು ಮೆಟ್ರೋ ನಿಲ್ದಾಣದಲ್ಲಿ, ‘ದೆಹಲಿ ಬನೇಗಾ ಖಲಿಸ್ತಾನ್’ ಎಂಬ ಬರಹವಿದೆ. ದೆಹಲಿ ಪೊಲೀಸರು ಇದನ್ನು ಯಾರು ಬರೆದಿದ್ದಾರೆಂಬ ಮಾಹಿತಿ ಕಲೆ ಹಾಕುತ್ತಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
#WATCH | Pro-Khalistan slogans written on the wall of Shivaji Park Metro station are being removed by the Delhi Police https://t.co/2mcKBfqJw3 pic.twitter.com/Qug5YB3kMf
— ANI (@ANI) August 27, 2023