ಮೈಸೂರಿನ ಮೃಗಾಲಯದಲ್ಲಿ ಹುಲಿ, ಚಿರತೆ, ಹಾವನ್ನು ದತ್ತು ಸ್ವೀಕರಿಸಿದ ವಿನಯ್ ಗುರೂಜಿ

ಹೊಸ ದಿಗಂತ ವರದಿ, ಮೈಸೂರು:

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ ಗೌರಿಗದ್ದೆ ದತ್ತ ಆಶ್ರಮದ ವಿನಯ್ ಗುರೂಜಿ ಪ್ರಾಣಿಗಳನ್ನು ದತ್ತು ಸ್ವೀಕರಿಸಿದರು.
ಗುರುವಾರ ಮೈಸೂರಿನಲ್ಲಿರುವ ಚಾಮರಾಜೇಂದ್ರ ಮೃಗಾಲಯ ವತಿಯಿಂದ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮ ಮತ್ತು ಮೃಗಾಲಯ ಸಿಬ್ಬಂದಿ ವರ್ಗದವರಿಗೆ ಆಹಾರ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೃಗಾಲಯದ ಒಂದು ಹುಲಿ, ಎರಡು ಚಿರತೆ ಮತ್ತು ಒಂದು ಹಾವನ್ನು ಮೂರು ಲಕ್ಷದ ಐದು ಸಾವಿರ ರೂ. ಚೆಕ್ ನೀಡಿ ದತ್ತು ಪಡೆದುಕೊಂಡರು.
ಈ ಸಂದರ್ಭದಲ್ಲಿ ಮೃಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 350 ಮಂದಿ ಸಿಬ್ಬಂದಿಗೆ ಪಡಿತರ ಕಿಟ್ ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿನಯ್ ಗುರೂಜಿ, ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷವನ್ನು ಮಾತುಕತೆಯ ಮೂಲಕ ಬಗೆಹರಿಸಬೇಕು ಎಂದು ಸಲಹೆ ನೀಡಿದರು.
ನಾವು ಗಾಂಧಿಜೀ ಬದುಕಿದ್ದ ದೇಶದಲ್ಲಿದ್ದೇವೆ. ಎಲ್ಲಾ ಧರ್ಮದಗಳ ಮೂಲ ಅಹಿಂಸೆ. ರಾಮ, ಶ್ರೀಕೃಷ್ಣ ಯುದ್ಧಕ್ಕೆ ಮೊದಲು ಶಾಂತಿಗಾಗಿ ಸಂಧಾನಕ್ಕೆ ಯತ್ನಿಸಿದ್ದರು. ನಾವೆಲ್ಲ ಮಾನವ ಧರ್ಮವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಎಲ್ಲಾ ಗ್ರಂಥಗಳ ಮೂಲ ಅಹಿಂಸೆ. ಅಹಿಂಸಾ ಪರಮೋ ಧರ್ಮ ಎಂಬುದನ್ನು ಸಾರಿರುವ ದೇಶ ನಮ್ಮ ಭಾರತ ಎಂದು ಹೇಳಿದರು.
ಮುಖ್ಯಮಂತ್ರಿಗಳು ಎಲ್ಲಾ ಧರ್ಮದ ಗುರುಗಳೊಂದಿಗೆ ಚಿಂತರ ಸಭೆ ಕರೆದು ಧರ್ಮ ಸಂಘರ್ಷಕ್ಕೆ ಕೊನೆಯಾಡಬೇಕು ಎಂದು ಮನವಿ ಮಾಡಿದರು. ಶಾಸದಿಂದ ಶಾಂತಿ ಬಂದಿದೆಯೇ ಶಸ ದಿಂದ ಅಲ್ಲ ಎಂದು ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಒಬ್ಬ ಆಧುನಿಕ ಕೃಷ್ಣ. ಕೃಷ್ಣ ಆತ್ಮ ಮತ್ತು ಧರ್ಮದ ಉದ್ಧಾರಕ್ಕಾಗಿ ಶೋಷಣೆಗೆ ಒಳಗಾದವರ ಪರವಾಗಿ ನಿಂತು ಭಗವದ್ಗೀತೆ ನೀಡಿದ್ದ. ಕಲಿಯುಗದಲ್ಲಿ ದೀನ ದಲಿತರಿಗೆ, ಶೋಷಿತರ ಉದ್ಧಾರಕ್ಕಾಗಿ ಅಂಬೇಡ್ಕರ್ ಅವರು ಸಂವಿಧಾನ ಎಂಬ ಆತ್ಮರಕ್ಷಣೆ ಗೀತೆಯನ್ನ ಕೊಟ್ಟಿದ್ದಾರೆ. ಅಂಬೇಡ್ಕರ್ ಜೀವನ ಚರಿತ್ರೆ ರಾಮಾಯಣ, ಮಹಾಭಾರತಕ್ಕೂ ಕಮ್ಮಿ ಇಲ್ಲ. ಶೋಷಿತರ ಧ್ವನಿಯಾಗಿರುವ ಅವರ ಜಯಂತಿಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿರುವುದು ಶ್ಲಾಘನೀಯ ಎಂದರು.
ಮೃಗಾಲಯದಲ್ಲಿ ಇಂದು ಪ್ರಾಣಿ ದತ್ತು ಪಡೆಯುವ ಮೂಲಕ ಅಂಬೇಡ್ಕರ್ ಜಯಂತಿ ಆಚರಣೆ ಮಾಡ್ತಿದ್ದೇವೆ. ಈಗಿನ ಕಾಲಗಟ್ಟದಲ್ಲಿ ಪ್ರಾಣಿ-ಪಕ್ಷಿಗಳೂ ಕೂಡಾ ಶೋಷಣೆಗೆ ಒಳಗಾಗುತ್ತಿವೆ. ಕಾಡನ್ನು ಕಡಿದು ನಾಡು ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಾಣಿಗಳ ಉಳಿವಿಗಾಗಿ ಗಮನಹರಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಾಣಿ ದತ್ತು ಸ್ವೀಕರಿಸುವ ಮೂಲಕ ಅರ್ಥಪೂರ್ಣವಾಗಿ ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಮೃಗಾಲಯ ಪ್ರಾಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ ಗೌರಿಗದ್ದೆ ದತ್ತ ಆಶ್ರಮದ ವಿನಯ್ ಗುರೂಜಿ ಅವರು ಚಾಮರಾಜ ಮೃಗಾಲಯದಲ್ಲಿ ಮೂರು ಪ್ರಾಣಿಗಳನ್ನು ದತ್ತು ಪಡೆಯುವುದರೊಂದಿಗೆ ಮೃಗಾಲಯದ ಸಿಬ್ಬಂದಿಗೆ ಪಡಿತರ ಕಿಟ್ ವಿತರಣೆ ಮಾಡಿದ್ದಾರೆ. ಜತೆಗೆ ಅವರ ಭಕ್ತಾದಿಗಳು ಸಹ ಪ್ರಾಣಿ ದತ್ತು ಸ್ವೀಕರಿಸಲು ಮುಂದಾಗಿರುವು ಒಳ್ಳೇಯ ಬೆಳವಣಿಗೆಯಾಗಿದೆ ಎಂದರು.
ಈ ವೇಳೆ ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಜ್ಯೋತಿ ರೇಷಣ್ಣ, ಗೋಕುಲ್ ಗೋವರ್ಧನ್, ಮುಡಾ ಸದಸ್ಯೆ ಲಕ್ಷಿ÷್ಮÃದೇವಿ, ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಉದ್ಯಮಿ ಪೋತರಾಜ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!