ಅಟಲ್ ಬಿಹಾರಿ ವಾಜಪೇಯಿ ಜನರಲ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಟಲ್ ಬಿಹಾರಿ ವಾಜಿಪೇಯಿ ಜನರಲ್ ಸ್ಕಾಲರ್‌ಶಿಪ್ ಯೋಜನೆಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ a2ascholarships.iccr.gov.in ವೆಬ್‌ಸೈಟ್‌ ನಲ್ಲಿ ಫೆಬ್ರವರಿ 20,2023 ರಿಂದ ಏಪ್ರಿಲ್‌ 30,2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಧಿಕೃತ ಅಧಿಸೂಚನೆಯ ಪ್ರಕಾರ, ICCR A2R ಪೋರ್ಟಲ್ ಅಭ್ಯರ್ಥಿಗಳಿಗೆ ಇದೀಗ ಅರ್ಜಿ ಸಲ್ಲಿಸಲು ಮುಕ್ತವಾಗಿದೆ. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ಮೇ 31ರವರೆಗೆ ಸಮಯಾವಕಾಶವಿರುತ್ತದೆ.

ವೆಬ್‌ಸೈಟ್ ಪ್ರಕಾರ, ಇಂಡಿಯನ್ ಮಿಶನ್ ಬೋರ್ಡ್ ನಿಂದ ವಿದ್ಯಾರ್ಥಿ ವೇತನವನ್ನು ನಿಯೋಜಿಸಲು ಮತ್ತು ಆಫರ್ ಲೆಟರ್‌ಗಳನ್ನು ರಚಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಜುಲೈ 15 ರೊಳಗೆ ಆಫರ್ ಲೆಟರ್ ಅನ್ನು ಸ್ವೀಕರಿಸುವುದು ಸಾಧ್ಯವಾಗುತ್ತದೆ.

ಮೊದಲ ಸುತ್ತಿನ ನಂತರ ಮತ್ತೆ ಸೀಟುಗಳು ಲಭ್ಯವಿದ್ದರೆ, ಇತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಜುಲೈ 22 ಕೊನೆಯ ದಿನಾಂಕವಾಗಿರುತ್ತದೆ.

ಅರ್ಹತೆಗಳು :

ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಗ್ಲಿಷ್‌ನಲ್ಲಿ ಪರಿಣಿತಿ ಹೊಂದಿರಬೇಕು.
ಅರ್ಜಿದಾರರು ಪದವಿಗಳಿಗೆ 18-30 ವರ್ಷ ವಯೋಮಿತಿ
ಪಿಎಚ್‌ಡಿಗಾದರೆ 18-45 ವರ್ಷಗಳ ನಡುವಿನವರಾಗಿರಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!