ಅಥಿಯಾ ಶೆಟ್ಟಿ-ರಾಹುಲ್ ಮದುವೆ ಸಂಭ್ರಮ: ಆಗಮಿಸುವ ಅತಿಥಿಗಳಿಗೆ ಷರತ್ತುಗಳು ಅನ್ವಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಹಾಗು ಟೀಮ್ ಇಂಡಿಯಾದಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು ,ಖ್ಯಾತ ನಟ ಸುನೀಲ್ ಶೆಟ್ಟಿ (Sunil Shetty) ಪುತ್ರಿ ಅಥಿಯಾ ಶೆಟ್ಟಿ (Athiya Shetty) ಮತ್ತು ಕ್ರಿಕೆಟಿಗ ಕೆ.ಎಲ್.ರಾಹುಲ್ (KL Rahul) ಮದುವೆ (Marriage) ಕಾರ್ಯಕ್ರಮಗಳು ಇಂದಿನಿಂದ ಶುರುವಾಗಲಿವೆ.

ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಗಳಲ್ಲಿ ಹಲವು ಗಣ್ಯರು ಭಾಗಿ ಆಗುತ್ತಿದ್ದು, ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮಹೌಸ್ ಬಂಗಲೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿದೆ.

ನಾಳೆ ಮೆಹಂದಿ ಸಮಾರಂಭ ನಡೆಯಲಿದೆ. ಜನವರಿ 23 ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ.

ಮದುವೆಗೆ ಬರುವ ಅತಿಥಿಗಳು ಕಡ್ಡಾಯವಾಗಿ ಮೊಬೈಲ್ ತರುವಂತಿಲ್ಲ ಎನ್ನುವ ಷರತ್ತನ್ನು ವಿಧಿಸಲಾಗಿದೆ. ಎರಡು ಕುಟುಂಬ ಸೇರಿ ಕೇವಲ ನೂರು ಜನಕ್ಕೆ ಮಾತ್ರ ಪ್ರವೇಶ ಕಲ್ಪಿಸಿರುವುದರಿಂದ ಬಾಲಿವುಡ್ ಬಹುತೇಕ ಗಣ್ಯರು ಮದುವೆ ಸಮಾರಂಭದಲ್ಲಿ ಗೈರು ಆಗಲಿದ್ದಾರೆ.

ಮದುವೆಗೆ ಬಂದವರು ಮೊಬೈಲ್ ತರುವಂತಿಲ್ಲ, ತಂದವರು ಫೋಟೋ ಸೆರೆ ಹಿಡಿದು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚದಂತೆ ಮನವಿ ಮಾಡಲಾಗಿದೆ. ಮದುವೆ ಆದ ಕೆಲ ದಿನಗಳ ನಂತರ ಆರತಕ್ಷತೆ ಆಯೋಜನೆ ಮಾಡಿರುವುದರಿಂದ ಅವತ್ತು ಸಿನಿಮಾ ರಂಗದ ಗಣ್ಯರು, ರಾಜಕೀಯ ಮುಖಂಡರು ಮತ್ತು ಆಪ್ತರನ್ನು ಕರೆಯುವ ಕುರಿತು ಎರಡು ಕುಟುಂಬಗಳ ನಿರ್ಧಾರ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!