ಹೊಸದಿಗಂತ ವರದಿ ಯಲ್ಲಾಪುರ:
ಬೆಂಗಳೂರಿನಲ್ಲಿ ಡಿ.5 ರಿಂದ ಪ್ರಾರಂಭವಾದ 62ನೇ ರಾಷ್ಟ್ರೀಯ ರೊಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂವರು ಕ್ರೀಡಾಪಟುಗಳು ಸಿನಿಯರ್ ಡರ್ಬಿ ವಿಭಾಗದಲ್ಲಿ ಈ ವರ್ಷದ ಎರಡನೆ ರಜತ ಪದಕ ಪಡೆದುಕೊಂಡಿದ್ದಾರೆ.
ಯಲ್ಲಾಪುರ ತಾಲೂಕಿನಿಂದ ಪ್ರತಿನಿಧಿಸಿದ ಪಟ್ಟಣದ ವೈ.ಟಿ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೇಜಲ್ ಸತೀಶ ನಾಯ್ಕ, ಕರ್ನಾಟಕ ರಾಜ್ಯ ಸಿನಿಯರ್ ಮಹಿಳಾ ಡರ್ಬಿ ತಂಡವನ್ನು ಪ್ರತಿನಿಧಿಸಿ ರಜತ ಪದಕ ಪಡೆದಿದ್ದಾರೆ. ಅಲ್ಲದೆ, ಶಿರಸಿಯ ಎಂಇಎಸ್ ಕಾಲೇಜಿನ ಅನಘಾ ರಮೇಶ ಹೆಗಡೆ, ದಾಂಡೇಲಿಯ ಸಾನಿಕಾ ಉಮೇಶ ತೊರತ್ ತಂಡದಲ್ಲಿದ್ದು ಪದಕಕ್ಕೆ ಭಾಜನರಾಗಿದ್ದಾರೆ.
ಕರ್ನಾಟಕ, ತಮಿಳನಾಡು , ಯುಪಿ, ಓರಿಸ್ಸಾ , ತಮಿಳನಾಡು , ಪಂಜಾಬ್ , ಮಹಾರಾಷ್ಟ ಇನ್ನಿತರ ರಾಜ್ಯದ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಈ ಮೂವರು ಕೈಗಾ ರೊಲರ್ ಸ್ಕೇಟಿಂಗ್ ಕ್ಲಬ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ತರಬೇತಿಯನ್ನು ಪಡೆಯುತ್ತಿದ್ದು ಸತತ ನಾಲ್ಕನೆ ಬಾರಿ ಕರ್ನಾಟಕ ತಂಡಕ್ಕಾಗಿ ಆಡುತ್ತಿದ್ದಾರೆ ಎಂದು ತರಬೇತುದಾರ ದೀಲಿಪ್ ಹಣಬರ್ ಹಾಗು ಸಹಾಯಕ ತರಬೇತುದಾರರಾದ ಮಂಜಪ್ಪಾ ನಾಯ್ಕ ತಿಳಿಸಿದ್ದಾರೆ.