ಮೋದಿ ಪರ ಹಾಡು ರಚಿಸಿದ್ದಕ್ಕೆ ಹಲ್ಲೆ: ಐವರ ಮೇಲೆ ಎಫ್‌ಐಆರ್‌ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಪರ ಹಾಡು ರಚಿಸಿ ಹಾಡಿದ್ದಕ್ಕೆ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಮೇಲೆ ಎಫ್‌ಐಆರ್‌ (FIR) ದಾಖಲಾಗಿದೆ.

ಹಳ್ಳಿಕೆರೆಹುಂಡಿ ಗ್ರಾಮದ ಲಕ್ಷ್ಮೀನಾರಾಯಣ್ (Lakshmi Narayan) ನೀಡಿದ ದೂರಿನ ಆಧಾರದಲ್ಲಿ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಸಲೀಂ, ಜಾವೀದ್, ಪಾಷಾ ಸೇರಿದಂತೆ ಇತರ ಇಬ್ಬರು ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಾಗಿದೆ.

ಮೂರನೇ ಭಾರಿ ಮೋದಿ ಅಧಿಕಾರಕ್ಕೆ ಏಕೆ ಬರಬೇಕು ಎಂಬ ವಿಚಾರದ ಮೇಲೆ ಗೀತೆ ರಚಿಸಿದ್ದ ಯುವಕ ಲಕ್ಷ್ಮೀ ನಾರಾಯಣ್. ಇದು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಿಸಲು ಸಾರ್ವಜನಿಕವಾಗಿ ಬೇಡಿಕೆ ಇಡುತ್ತಿದ್ದ ವೇಳೆ ಮೈಸೂರಿನ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಯುವಕನ ಮೇಲೆ ಪುಂಡರು ಹಲ್ಲೆ ನಡೆಸಿದ್ದರು. ಯುವಕನ ಬಾಯಿ ಮುಚ್ಚಿ, ಕೈಗಳನ್ನು ಹಿಡಿದು ಹಲ್ಲೆ ನಡೆಸಿದ್ದಲ್ಲದೇ ತಲೆಮೇಲೆ ಬೀಯರ್ ಬಾಟಲಿ ಸುರಿದು, ಬಾಟಲಿಯಿಂದ ಕುಯ್ದಿದ್ದ ರಾಕ್ಷಸರು. ಅಲ್ಲದೆ ಯುವಕನ ಮೈಮೇಲೆ ಸಿಗರೇಟ್‌ನಿಂದ ಸುಟ್ಟಿದ್ದ ಆರೋಪಿಗಳು. ಹಲ್ಲೆ ಕುರಿತು ಪೊಲಿಸ್ ಠಾಣೆಗೆ ದೂರು ನೀಡಿದ್ದ ಯುವಕ. ಲಕ್ಷ್ಮೀ ನಾರಾಯಣ್ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!