ಇಸ್ರೇಲ್​ನಲ್ಲಿ ಹಮಾಸ್ ಉಗ್ರರ ದಾಳಿ: ನಕ್ಷೆ, ದಾಳಿಯ ಜಾಡಿನ ಚಿತ್ರಣ ಬಿಡುಗಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಸ್ರೇಲ್​ ಹಮಾಸ್ ಉಗ್ರರ ಭೀಕರ ಕದನ ಮುಂದುವರಿದಿದ್ದು, ಇದರ ನಡುವೆ ಹತ್ಯಾಕಾಂಡದ ಘಟನೆ ನಡೆದ ಮೂರು ವಾರಗಳ ಬಳಿಕ ಚಿತ್ರಣ ನಕ್ಷೆಯನ್ನು ಬಿಡುಗಡೆ ಮಾಡಲಾಗಿದೆ.

ಇಸ್ರೇಲ್ ವಿದೇಶಾಂಗ ಸಚಿವಾಲಯದ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಹತ್ಯಾಕಾಂಡಗಳ ನಕ್ಷೆ ಎಂಬ ಶೀರ್ಷಿಕೆಯಲ್ಲಿ ಈ ‘ರಕ್ತಸಿಕ್ತ’ ಚಿತ್ರಣವನ್ನು ಬಿಡುಗಡೆ ಮಾಡಲಾಗಿದೆ.

ಅಕ್ಟೋಬರ್ 7ರ ಹತ್ಯಾಕಾಂಡದಲ್ಲಿ ಏನೇನಾಯ್ತು, ಎಲ್ಲಿ ಎಷ್ಟು ಮಂದಿಯನ್ನು ಹತ್ಯೆ ಮಾಡಲಾಯಿತು ಎಂಬ ವಿವರವನ್ನು ಈ ನಕ್ಷೆ ಮೂಲಕ ತಿಳಿಸಲಾಗಿದೆ.

ಈ ಹತ್ಯಾಕಾಂಡದಲ್ಲಿ ಹಿಂಸೆ, ಹಲ್ಲೆ, ಅತ್ಯಾಚಾರ ಸೇರಿ 1,400ಕ್ಕೂ ಅಧಿಕ ಕೊಲೆ, 239 ಅಪಹರಣ ನಡೆದಿದ್ದು, 40 ಮಂದಿ ನಾಪತ್ತೆ ಆಗಿದ್ದಾರೆ. ಅಲ್ಲದೆ 4834ಕ್ಕೂ ಅಧಿಕ ಮಂದಿ ಗಾಯಾಳುಗಳಾಗಿದ್ದಾರೆ ಎಂಬ ಮಾಹಿತಿಯೊಂದಿಗೆ ಇಸ್ರೇಲ್ ವಿದೇಶಾಂಗ ಸಚಿವಾಲಯ ಈ ಹತ್ಯಾಕಾಂಡದ ನಕ್ಷೆಯನ್ನು ಹಂಚಿಕೊಂಡಿದೆ. ಅದರಲ್ಲಿ ಹಮಾಸ್ ಉಗ್ರರ ಕ್ರೌರ್ಯದ ಜಾಡನ್ನು ಕೆಂಪು ಚುಕ್ಕೆಗಳೊಂದಿಗೆ ಗುರುತಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!