ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ನಟ ದರ್ಶನ್ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯ ಎದುರು ಮನೆಯಲ್ಲಿರುವ ಮಹಿಳೆಗೆ ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ದರ್ಶನ್ ವಿರುದ್ಧ ದೂರು ನೀಡಲಾಗಿದೆ.
ಮಹಿಳೆಯ ದೂರನ್ನು ಆಧರಿಸಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಎದುರು ಮನೆಯ ಮಹಿಳೆಗೆ ನಾಯಿಯನ್ನು ಕಚ್ಚಿಸಿದ ಆರೋಪದಲ್ಲಿ ದರ್ಶನ್ 2ನೇ ಆರೋಪಿ (ಎ2) ಆಗಿದ್ದಾರೆ. ನಾಯಿ ಕಚ್ಚಿಸಿಕೊಂಡ ಮಹಿಳೆ ಅಮಿತಾ ಜಿಂದಾಲ್ ಎನ್ನುವವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದರ್ಶನ್ ಮನೆ ಬಳಿ ಕಾರ್ ಪಾರ್ಕ್ ಮಾಡಿದ್ದ ಮಹಿಳೆಯು ಕಾರನ್ನು ತೆಗೆದುಕೊಂಡು ಹೋಗಲು ಬಂದಿದ್ದಾಳೆ. ಈ ವೇಳೆ ಕಾರ್ ಬಳಿ ದರ್ಶನ್ ಮನೆಯಲ್ಲಿ ಸಾಕಲಾಗಿದ್ದ ಮೂರು ನಾಯಿಗಳು ಇದ್ದವು. ಈ ನಾಯಿಗಳನ್ನು ಹಿಡಿದುಕೊಳ್ಳಿ ನಾನು ಕಾರನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಸಾಕಣೆ ಮಾಡುವ ದರ್ಶನ್ ಮನೆಯ ಹುಡುಗರಿಗೆ ಮನವಿ ಮಾಡಿದ್ದಾಳೆ. ಆದರೆ, ದರ್ಶನ್ ಮನೆಯ ಹುಡುಗರು ಇದಕ್ಕೆ ಪ್ರತಿಕ್ರಿಯೆ ನೀಡದೇ ಸುಮ್ಮನೇ ನಿಂತಿದ್ದಾರೆ. ಆಗ, ಮಹಿಳೆ ಜೋರಾಗಿ ವಾಗ್ವಾದ ನಡೆಸಿದ್ದಾಳೆ. ಆದರೂ, ದರ್ಶನ್ ಮನೆಯ ಹುಡುಗರು ನಾಯಿಯನ್ನು ಹಿಡಿದುಕೊಳ್ಳಲಿಲ್ಲ. ಇನ್ನು ನಾಯಿಗಳ ಪಕ್ಕದಲ್ಲಿಯೇ ಹೋಗಿ ಕಾರನ್ನು ತೆಗೆದುಕೊಳ್ಳು ಮುಂದಾದ ಮಹಿಳೆಯ ಮೇಲೆ ನಾಯಿಗಳು ದಾಳಿ ಮಾಡಿದ್ದು,. ಹೀಗಾಗಿ ಮಹಿಳೆ ದರ್ಶನ್ ಹಾಗೂ ನಾಯಿಗಳನ್ನು ನೋಡಿಕೊಳ್ತಿದ್ದವರ ಮೇಲೂ ಕೇಸ್ ದಾಖಲಿಸಿದ್ದಾಳೆ.
ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 289 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.