ಹೊಸದಿಗಂತ ವರದಿ,ಮುಂಡಗೋಡ:
ತಾಲೂಕಿನ ಬಡ್ಡಿಗೇರಿ ಸನಿಹದ ಗದ್ದೆಗಳಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳು ನುಗ್ಗಿ ದಾಳಿ ನಡೆಸಿ ಅಡಕೆ, ಕಬ್ಬು ಹಾಗೂ ಭತ್ತದ ಬೆಳೆಯನ್ನು ತಿಂದು ತುಳಿದು ನಾಶ ಪಡಿಸುತ್ತೀವೆ.
ತಾಲೂಕಿನ ಬಡ್ಡಿಗೇರಿ ಗ್ರಾಮದ ಲಕ್ಷ್ಮಣ ತೋರವತ್ ಎಂಬುವರ ಅಡಕೆ ಗಿಡಗಳು, ಜಾನು ಕೊಕರೆ ಎಂಬವರ ಭತ್ತದ ಬೆಳೆ, ಮತ್ತು ಜಗ್ಗು ಕೊಕರೆ ಎಂಬುವರ ಕಬ್ಬು ಬೆಳೆಯನ್ನು ತಿಂದು ತುಳಿದು ನಾಶ ಪಡಿಸಿದಲ್ಲದೆ ಅಡಕೆ ಗಿಡಗಳು ತುಳಿದು ಕಿತ್ತು ಹಾಕಿವೆ. ಕಷ್ಟಪಟ್ಟು ಬೆಳೆದ ಬೆಳೆಯೂ ಕಾಡಾನೆಗಳ ದಾಳಿಗೆ ಹಾನಿಯಾಗಿದೆ ಅಲ್ಲದೆ ಕೃಷಿ ಪರಿPರಗಳನ್ನು ತುಳಿದು ಹಾನಿ ಮಾಡಿದೆ.
ರಾತ್ರಿಗುತ್ತಿದ್ದಂತೆ ಅರಣ್ಯದಿಂದ ಗದ್ದೆಗಳತ್ತ ಬರುತ್ತಿರುವ ಕಾಡಾನೆಗಳು ಗದ್ದೆಯಲ್ಲಿನ ಬೆಳೆಯನ್ನು ತಿಂದು ತುಳಿದು ನಾಶ ಪಡಿಸಿ ಹೋಗುತ್ತಿವೆ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸುವ ಕಾರ್ಯ ಮಾಡುತ್ತಿದ್ದಾರೆ. ಕಾಡಿನಂಚಿನ ಗದ್ದೆಗಳ ರೈತರು ಆತಂಕಕ್ಕೊಳಗಾಗಿದ್ದು ಕಾಡಾನೆಗಳು ಯಾವ ಸಮಯದಲ್ಲಿ ತಮ್ಮ ಗದ್ದೆಗಳಿಗೆ ದಾಳಿ ನಡೆಸುತ್ತವೆ ಎಂಬ ಭಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.