ಅರಬ್ಬಿ ಸಮುದ್ರದಲ್ಲಿ ವ್ಯಾಪಾರಿ ಹಡಗಿನ ಮೇಲೆ ದಾಳಿ: ಡ್ರೋನ್‌ನ ಅವಶೇಷ ಪತ್ತೆ ಮಾಡಿದ ಭಾರತೀಯ ನೌಕಾಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರಬ್ಬಿ ಸಮುದ್ರದಲ್ಲಿ ಮಂಗಳೂರು ಕಡೆ ಹೊರಟಿದ್ದ ವ್ಯಾಪರ ಹಡಗಿನ ಮೇಲೆ ದಾಳಿ ಮಾಡಿದ್ದ ಡ್ರೋನ್ ನ ಅವಶೇಷಗಳನ್ನು ಭಾರತೀಯ ನೌಕಾಪಡೆ ಪತ್ತೆ ಮಾಡಿದ್ದು, ಡ್ರೋನ್ ನಲ್ಲಿದ್ದ ಎಲ್ಲ ಸ್ಫೋಟಕಗಳನ್ನು ಸ್ಫೋಟಿಸುವ ಮೂಲಕ ನಾಶಪಡಿಸಿದೆ ಎಂದು ತಿಳಿದುಬಂದಿದೆ.

ವ್ಯಾಪಾರಿ ಹಡಗು ಎಂವಿ ಚೆಮ್ ಪ್ಲುಟೊಗೆ ಅಪ್ಪಳಿಸಿದ ಡ್ರೋನ್ ಅನ್ನು ಭಾರತೀಯ ನೌಕಾಪಡೆ ಸಿಬ್ಬಂದಿಗಳು ಪತ್ತೆ ಮಾಡಿದ್ದು, ಹೆಚ್ಚಿನ ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಭಾರತೀಯ ನೌಕಾಪಡೆಯು ಡ್ರೋನ್ ನ ಅವಶೇಷಗಳನ್ನು ಸಂಗ್ರಹಿಸಿತ್ತು.

ಭಾರತದ ಪಶ್ಚಿಮ ಕರಾವಳಿಯಿಂದ 400 ಕಿಮೀ ದೂರದಲ್ಲಿ ಪಯಣಿಸುತ್ತಿದ್ದ ವ್ಯಾಪಾರಿ ಹಡಗು ಎಂವಿ ಚೆಮ್ ಪ್ಲುಟೊಗೆ ಡ್ರೋನ್ ಅಪ್ಪಳಿಸಿತ್ತು.ಈ ದಾಳಿ ಬೆನ್ನಲ್ಲೇ ಹಡಗಿನ ರಕ್ಷಣೆಗೆ ಧಾವಿಸಿದ್ದ ಭಾರತೀಯ ನೌಕಾದಳ ಹಡಗಿಗೆ ಅಪ್ಪಳಿಸಿದ್ದ ಡ್ರೋನ್ ನ ಜಾಡು ಹಿಡಿದು ತನಿಖೆ ನಡೆಸಿತ್ತು.

ಈ ವೇಳೆ ಪತ್ತೆಯಾದ ಡ್ರೋನ್ ನ ಅವಶೇಷಗಳನ್ನು ಈಗ ಮುಂಬೈನಲ್ಲಿರುವ ಸ್ಯಾನಿಟೈಸೇಶನ್ ಮತ್ತು ಪ್ರಾಥಮಿಕ ವಿಶ್ಲೇಷಣೆಗೊಳಪಡಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!