ಹೊಸದಿಗಂತ ವರದಿ,ಕಲಬುರಗಿ:
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ರಾಮ ನವಮಿ ಪ್ರಯುಕ್ತ ವಿವಿಯಲ್ಲಿನ ಲಕ್ಷ್ಮಿ ದೇವಸ್ಥಾನದಲ್ಲಿ ರಾಮನವಮಿ ಆಚರಣೆ ಮಾಡಿ, ವಾಪಸ್ ಬರುವ ಸಂದರ್ಭದಲ್ಲಿ ಎಡಪಂಥಿಯ ವಿಚಾರಧಾರೆಯುಳ್ಳ ವಿವಿಯ ವಿದ್ಯಾರ್ಥಿಗಳಿಂದ ಎಬಿವಿಪಿ, ಹಾಗೂ ಆರ್,ಎಸ್.ಎಸ್. ಸಂಘಟನೆಗೆ ಸೇರಿದವರು ಎಂಬ ಕಾರಣಕ್ಕಾಗಿ ವಿಶ್ವನಾಥ ಹಾಗೂ ನರೇಂದ್ರ ಎಂಬ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ಎಬಿವಿಪಿ ಹೇಳಿದೆ.
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದಲೇ ನಿನ್ನೆ ರಾಮ ನವಮಿ ಆಚರಣೆ ಮಾಡಿದ್ದರು. ವಿವಿ ಕ್ಯಾಂಪಸ್,ನ ಲಕ್ಷ್ಮಿ ದೇವಸ್ಥಾನದಲ್ಲಿ ರಾಮನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಮರಳಿ ಬರುತ್ತಿರುವಾಗ ಈ ವೇಳೆ ಬೈಕ್ ಮತ್ತು ಕಾರಿನಲ್ಲಿ ಬಂದ ಸಾಧಿಕ ಹಾಗೂ ರಾಹುಲ್, ನರೇಂದ್ರ ಮತ್ತು ವಿಶ್ವನಾಥ ಅವರನ್ನ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಆರ್,ಎಸ್,ಎಸ್ ಹಾಗೂ ಎಬಿವಿಪಿ ಕಾರ್ಯಚಟುವಟಕೆಗಳನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಸಬಾರದು, ಅವುಗಳ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ಹೇಳುತ್ತಾ, ಎಬಿವಿಪಿ ಕಾರ್ಯಕರ್ತ ವಿಶ್ವನಾಥ ಮತ್ತು ನರೇಂದ್ರ ಅವರ ಮೇಲೆ ಸಾಧಿಕ ಮತ್ತು ರಾಹುಲ ಸೇರಿದಂತೆ ನಾಲ್ಕು ಜನರ ಗುಂಪು ಹಲ್ಲೆ ಮಾಡಿದೆ.
ಸೋಮವಾರ ವಿಶ್ವವಿದ್ಯಾಲಯದ ಎದುರಿಗೆ ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿದ ಎಬಿವಿಪಿ ವಿಭಾಗ ವಿಶ್ವವಿದ್ಯಾಲಯದ ಪ್ರಮುಖ ರಾಜಶೇಖರ ಭಾವಿಮನಿ, ದೇವಸ್ಥಾನದಲ್ಲಿ ಪೂಜೆ ಮೂಗಿಸಿ ಮರಳಿ ಬರುವಾಗ ನಾಲ್ಕು ವಿದ್ಯಾರ್ಥಿಗಳ ತಂಡೊಂದು ಅವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿದ್ಯಾರ್ಥಿಗಳ ಬಟ್ಟೆ ಹರಿದು ಹಲ್ಲೆಯನ್ನು ನಡೆಸಿದ್ದಾರೆ. ಮತ್ತು ವಿದ್ಯಾರ್ಥಿಯನ್ನು ಅಪಹರಿಸುವಂತಹ ಪ್ರಯತ್ನವನ್ನು ಈ ಸಂದರ್ಭದಲ್ಲಿ ಮಾಡಿದ್ದಾರೆ ಎಂದರು.ಈ ಘಟನೆಯೂ ವ್ಯವಸ್ಥಿತ ಸಂಚಿನಿಂದ ನಡೆದಿರುವ ರೀತಿಯಾಗಿ ಕಂಡುಬರುತ್ತಿದೆ. ಈ ರೀತಿಯಾಗಿ ಕ್ಯಾಂಪಸನಲ್ಲಿ ವಿದ್ಯಾರ್ಥಿಗಳ ನಡುವೆ ವೈಷಮ್ಯ ಬಿತ್ತುವಂತ ಕೆಲಸವನ್ನು ಮಾಡಿ ಭಯದ ವಾತಾವರಣವನ್ನು ವಿಶ್ವವಿದ್ಯಾಲಯದಲ್ಲಿ ಸೃಷ್ಟಿಸುವಂತ ಕೆಲಸವನ್ನು ಗೂಂಡಾ ವರ್ತನೆಯ ವಿದ್ಯಾರ್ಥಿಗಳು ಮಾಡಿದ್ದಾರೆ ಎಂದರು.
ಗೂಂಡಾ ವರ್ತನೆಯನ್ನು ತೋರಿದ ವಿದ್ಯಾರ್ಥಿಗಳಿಗೆ ತಾಕೀತು ಮಾಡಿದ ಎಬಿವಿಪಿ, ನಾವು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲನೆ ಮಾಡುತ್ತೇವೆ. ಅದರ ಜೊತೆಗೆ ಗಾಂಧಿಜೀಯವ ಶಾಂತಿ ಪ್ರೀಯವನ್ನು ಸಹ ಪಾಲನೆ ಮಾಡುತ್ತೇವೆ, ಆದರೆ ನಮ್ಮಿಂದ ಆಂಜನೇಯನ ಹತ್ತಿರ ಇರುವ ಗಧೆಯನ್ನು ಬಳಕೆ ಮಾಡುವುದು ನಮಗೆ ಗೊತ್ತಿದೆ ಎಂದರು.ವೈಚಾರಿಕ ಸಂಘರ್ಷ ಇದ್ದರೆ ಮಾತಿನ ಮೂಲಕ ಬಗೆಹರಿಸಿಕೊಳ್ಳಣಾ. ಇದನ್ನು ಬಿಟ್ಟು ಜೆ.ಎನ್.ಯೂ ವಿಶ್ವವಿದ್ಯಾಲಯದ ಧಾರಿಯಲ್ಲಿ ಈ ವಿಶ್ವವಿದ್ಯಾಲಯವನ್ನು ಒಯ್ಯಲು ನಾವು ಬಿಡುವುದಿಲ್ಲ ಎಂದರು. ಗೂಂಡಾ ವರ್ತನೆಯನ್ನು ತೋರಿರುವ ವಿದ್ಯಾರ್ಥಿಗಳ ವಿರುದ್ದ ಕೂಡಲೇ ವಿಶ್ವವಿದ್ಯಾಲಯವು ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕು. ಮತ್ತು ಹಲ್ಲೆ ಮಾಡಿದ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದಿಂದ ವಜಾ ಮಾಡಬೇಕೆಂದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಪರಿಷತ್ ಘಟಕದ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.