ಯಾರೂ ಹೇಳಿದರಂತೆ ಸಿಎಂ ಲಾಠಿ ಹಿಡಿದು ರಸ್ತೆಯಲ್ಲಿ ನಿಲ್ಲಲು ಆಗುವದಿಲ್ಲ: ಬಿ.ಸಿ.ಪಾಟೀಲ್

ಹೊಸದಿಗಂತ ವರದಿ, ಗದಗ:

ಮುಖ್ಯಮಂತ್ರಿ ಅವರು ಬಸವರಾಜ ಬೊಮ್ಮಾಯಿನೂ ಹೌದು, ಬಸವಣ್ಣನೂ ಹೌದು ಆದರೆ ಮೂಕ ಬಸವಣ್ಣ ಅಲ್ಲ. ಯಾರೋ ಏನೋ ಹೇಳಿದರು ಎಂದು ಬೀದಿಯಲ್ಲಿ ಮುಖ್ಯಮಂತ್ರಿ ಅವರು ಹೋಗಿ ಲಾಠಿ ಹಿಡಿದುಕೊಂಡು ನಿಲ್ಲುವದಕ್ಕೆ ಆಗುವದಿಲ್ಲ ಮತ್ತು ಅಗತ್ಯವು ಇಲ್ಲ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಸಿಎಂ ಮೌನಿ ಎಂಬ ಹೇಳಿಕೆಯ ಕುರಿತು ಮಾತನಾಡಿ, ಕಾನೂನು ಸುವ್ಯವಸ್ಥೆ ಬಗ್ಗೆ ಏನೇನೂ ಕ್ರಮ ಕೈಗೊಳ್ಳಬೇಕು ಎಲ್ಲವನ್ನು ಸಿಎಂ ಕೈಗೊಂಡಿದ್ದಾರೆ. ಅವುಗಳನ್ನು ಅಧಿಕಾರಿಗಳು ಅನುಷ್ಠಾನಕ್ಕೆ ತರುತ್ತಾರೆ.
ರಸ್ತೆ ಮಧ್ಯೆದಲ್ಲಿ ನಿಂತುಕೊಂಡು ಸಿಎಂ ಮಾತನಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಸೌಹಾರ್ದಯತವಾಗಿ ಬದುಕಬೇಕು ಎನ್ನುವುದು ಎಲ್ಲರ ಆಶಯ. ಸಂವಿಧಾನ ಬದ್ಧವಾಗಿ ಎಲ್ಲರೂ ಅವರವರ ಧರ್ಮ ಆಚರಣೆ ಮಾಡಬಹುದು. ಆದರೆ, ಒಂದು ಧರ್ಮದವರು ಇನ್ನೊಂದು ಧರ್ಮಕ್ಕೆ ತೊಂದರೆ ಕೊಡುವುದು ಸರಿಯಲ್ಲ ಎಂದು ಹೇಳಿದರು.
ಸರ್ಕಾರದ ಪ್ರಾಯೋಜಿತ ಹೋರಾಟ ಎಂಬ ಬಿ. ಕೆ. ಹರಿಪ್ರಸಾದ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ಹರಿಪ್ರಸಾದ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಮಾಡುವದಕ್ಕೆ ಬೇರೇ ಕೆಲಸ ಇಲ್ಲ
ಹೀಗಾಗಿ ವಿನಾಕಾರಣ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ನಮಗೆ ಜನಸೇವೆ ಮಾಡುವ ಕೆಲಸವಿದೆ.
ಉಕ್ರೇನ್, ರಷ್ಯಾ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ ಮುಂದಿನ ದಿನಗಳಲ್ಲಿ ಬೆಲೆ ಕಡಿಮೆಯಾಗಲಿದೆ ಎಂದು ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!