ಹೊಸದಿಗಂತ ವರದಿ ಕಲಬುರಗಿ:
ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಮೇಲೆ ನಡೆದಿದ್ದ ಎನ್ನಲಾದ ಹಲ್ಲೆ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಿಕಾ ಗೋಷ್ಠಿ ನಡೆಸಲು ಆಗಮಿಸುತ್ತಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಪೋಲಿಸರು ಪತ್ರಿಕಾಗೋಷ್ಠಿ ನಡೆಸುವ ಮುನ್ನವೇ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರದ ಭಾರತ ಪ್ರೈಡ್ ಅಪಾರ್ಟ್ಮೆಂಟ್ ನಲ್ಲಿ ವಾಸವಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಕಲಬುರಗಿ ನಗರದ ಚೌಕ್ ಪೋಲಿಸ್ ಠಾಣೆ ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಇತ್ತಿಚೆಗೆ ಶಹಾಬಾದ್ ಬಳಿ ತಮ್ಮ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ ಎಂದು ಮುಖಂಡ ಮಣಿಕಂಠ ರಾಠೋಡ ದೂರಿದ್ದರು.ಆದರೆ, ಅದೆಲ್ಲವೂ ಕಟ್ಟುಕಥೆ,ಹಲ್ಲೆಯಾಗಿಲ್ಲ.ಕಾರ ಅಪಘಾತವಾಗಿದ್ದು,ಅದನ್ನು ಹಲ್ಲೆ ಎಂದು ಬಿಂಬಿಸಲು ಯತ್ನಿಸಿದ್ದಾನೆ ಎಂಬುದು ಕಲಬುರಗಿ ಪೋಲಿಸರ ತನಿಖೆಯಿಂದ ದೃಢಪಟ್ಟಿದೆ.
ಪೋಲಿಸರ ತನಿಖೆಯ ವರದಿ ಸುಳ್ಳು.ನನ್ನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಸಾಕ್ಷಿ ಬಿಡುಗಡೆ ಮಾಡಲು ಗುರುವಾರ ಬೆಳಿಗ್ಗೆ ಮುಖಂಡ ಮಣಿಕಂಠ ರಾಠೋಡ ಪತ್ರಿಕಾಗೋಷ್ಠಿ ಕರೆದಿದ್ದರು.ಪತ್ರಿಕಾಗೋಷ್ಠಿಗೆ ಹಾಜರಾಗುವ ಮುನ್ನವೇ ಪೋಲಿಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.