Saturday, March 25, 2023

Latest Posts

ಡಿಕೆ ಶಿವಕುಮಾರ ಕಿವಿಯಿಂದ ಹೂ ತೆಗೆದ ಯಡಿಯೂರಪ್ಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಜ್ಯ ಬಜೆಟ್ ಅನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮಂಡಿಸಿದರು. ಇದಕ್ಕೂ ಮುನ್ನ ಸಿದ್ದರಾಮಯ್ಯರನ್ನು ಅವರು ಮಾಡಿದ ಕಿವಿಯಲ್ಲಿ ಹೂ ಕಾಮೆಂಟ್ ಸದನದಲ್ಲಿ ಸೃಷ್ಟಿಸಿದ ಉದ್ವಿಗ್ನ ವಾತಾವರಣ ಬಜೆಟ್ ಮಂಡನೆ ಮುಗಿಯುವಷ್ಟರಲ್ಲಿ ತಿಳಿಯಾಗಿತ್ತು.

ಬಳಿಕ ಸದನದಿಂದ ಹೊರ ಬರುವಾಗ ಡಿಕೆ ಶಿವಕುಮಾರ್ (DK Shivakumar) ಕೇವಲ ಒಂದು ಕಿವಿಯಲ್ಲ ಎರಡೂ ಕಿವಿಗಳಲ್ಲಿ ಹೂಗಳನ್ನು ಇಟ್ಟುಕೊಂಡಿದ್ದರು.

ಈ ವೇಳೆ ಡಿಕೆ ಶಿವಕುಮಾರ್‌ ಅವರನ್ನು ನಕ್ಕು ಎಡ ಕಿವಿ ಮೇಲಿದ್ದ ಚೆಂಡು ಹೂವನ್ನು ತೆಗೆದು ಅಲ್ಲಿದ್ದ ಒಬ್ಬರ ಕೈಗೆ ಕೊಟ್ಟರು. ಯಡಿಯೂರಪ್ಪ ಅವರು ಹೂವು ತೆಗೆದಿದ್ದನ್ನು ನೋಡಿ ನಕ್ಕ ಡಿಕೆಶಿ ಬಳಿಕ ಮತ್ತೆ ಹೂವನ್ನು ಕಿವಿಗೆ ಹಾಕಿ ತೆರಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!