ಬೆಂಗಳೂರಿನಲ್ಲಿ ಪಟಾಕಿ ಅಂಗಡಿ ಮೇಲೆ ದಾಳಿ: ಕೇಸ್ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನಲ್ಲಿ ಪಟಾಕಿ ಅಂಗಡಿ ಮೇಲೆ ಪೊಲೀಸರು ದಾಳಿ ನಡೆಸಿ ಅನಧಿಕೃತ ಅಂಗಡಿಗಳನ್ನು ಸೀಜ್ ಮಾಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಅನೇಕಲ್ ತಾಲೂಕಿನ ಹೆಬ್ಬಗೋಡಿ ಮುಖ್ಯ ರಸ್ತೆಯಲ್ಲಿರುವ ಪಟಾಕಿ ಅಂಗಡಿ ಮೇಲೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಲೈಸೆನ್ಸ್ ಇಲ್ಲದೇ ಮಾರುತ್ತಿದ್ದ ಪಟಾಕಿ ಅಂಗಡಿಯನ್ನು ಬಂದ್ ಮಾಡಿ ಮಾಲೀಕರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.
ಜಿಲ್ಲಾಧಿಕಾರಿ ನಕಲು ಸಹಿ ಬಳಕೆ ಮಾಡಿ ನಕಲು ಲೈಸೆನ್ಸ್ ಗಳನ್ನು ಸೃಷ್ಟಿಮಾಡಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!