ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮೇಲೆ ಹಮಾಸ್ ಉಗ್ರರ ಗುಂಪು 5000ಕ್ಕೂ ಅಧಿಕ ರಾಕೆಟ್ ದಾಳಿ ನಡೆಸಿದ್ದು ಇದರ ಬೆನ್ನಲ್ಲೇ ಇಸ್ರೇಲ್‌ನಲ್ಲಿರುವ ಭಾರತೀಯರರ ರಕ್ಷಣೆಗೆ ಭಾರತೀಯ ರಾಯಭಾರಿ ಕಚೇರಿಯಿಂದ ಅಗತ್ಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಸಹಾಯವಾಣಿ ಆರಂಭಿಸಿದೆ.
ಇಸ್ರೇಲ್ ಗಡಿಯಲ್ಲಿ ಯುದ್ಧದ ವಾತಾವರಣ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಅಧಿಕಾರಿಗಳು ನೀಡುವ ಸುರಕ್ಷತಾ ಮಾನದಂಡ ಅನುಸರಿಸಿ ಅನಗತ್ಯ ಸಂಚಾರ ಬೇಡ, ಸುರಕ್ಷತಾ ಸ್ಥಳಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಇನ್ನು ಇಸ್ರೇಲ್ ನಲ್ಲಿ ವಾಸಿಸುವ ಭಾರತೀಯರಿಗೆ ರಾಯಭಾರಿ ಕಚೇರಿಯಿಂದ ಎಚ್ಚರಿಕೆ ನೀಡುವ ಜೊತೆಗೆ, ಅಗತ್ಯ ಬಿದ್ದಲ್ಲಿ +97235226748 ಸಂಖ್ಯೆಯನ್ನ ಸಂಪರ್ಕ ಮಾಡುವಂತೆ ಮಾಹಿತಿ ನೀಡಲಾಗಿದೆ.
ಇಂದು ಬೆಳಿಗ್ಗೆಯಿಂದ ಹಮಾಸಾ ಉಗ್ರರು ಇಸ್ರೇಲ್ ಮೇಲೆ 5000 ರಾಕೆಟ್ ದಾಳಿಯನ್ನ ನಡೆಸಿದ್ದಾರೆ. ಗಾಜಾ ಸ್ಟ್ರಿಪ್‌ನಿಂದ ಶನಿವಾರ ಇಸ್ರೇಲ್ ಮೇಲೆ ಹಮಾಸ್ ಉಗ್ರರ ಗುಂಪು ಸಾವಿರಾರು ರಾಕೆಟ್‌ಗಳ ಸುರಿಮಳೆ ಸುರಿಸಿ, ದಿಢೀರ್ ಯುದ್ಧ ಸಾರಿದೆ. ಇದರಿಂದ ದಿಢೀರನೇ ಇಸ್ರೇಲ್ ಮೇಲೆ ಸ್ಟೇಟ್ ಆಫ್ ವಾರ್ ಆರಂಭವಾಗಿದೆ. ಇಸ್ರೇಲಿ ಸೈನ್ಯವು ದೇಶದ ದಕ್ಷಿಣ ಮತ್ತು ಮಧ್ಯ ಪ್ರದೇಶಗಳಲ್ಲಿ ಸೈರನ್‌ಗಳ ಬಗ್ಗೆ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರನ್ನು ಬಾಂಬ್ ಶೆಲ್ಟರ್‌ಗಳ ಬಳಿ ಇರುವಂತೆ ಮನವಿ ಮಾಡಿಕೊಂಡಿದೆ.