ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವಿನ ಸಂಘರ್ಷ ಶನಿವಾರ ವಿಕೋಪಕ್ಕೆ ತಿರುಗಿದ್ದು, ಪ್ಯಾಲಿಸ್ತೇನಿಯನ್ನರ ಪರ ಹೋರಾಟ ಮಾಡುವ ಭಯೋತ್ಪಾದಕ ಸಂಘಟನೆ ಹಮಾಸ್, ಒಂದೇ ದಿನ ಬರೋಬ್ಬರಿ 7 ಸಾವಿರ ರಾಕೆಟ್‌ಗಳನ್ನು ಇಸ್ರೇಲ್‌ನತ್ತ ಉಡಾಯಿಸಿದೆ.
ಇದರ ಬೆನ್ನಲ್ಲಿಯೇ ಹಮಾಸ್‌ನ ದಾಳಿಗೆ ಮಧ್ಯಪ್ರಾಚ್ಯದ ಮಹಾಬಲಿಷ್ಠ ದೇಶಗಳಲ್ಲಿ ಒಂದಾದ ಮುಸ್ಲಿಂ ಸಂಪ್ರದಾಯವಾದಿ ದೇಶ ಇರಾನ್ ನೇರವಾಗಿ ಬೆಂಬಲ ವ್ಯಕ್ತಪಡಿಸಿದೆ.
ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರ ಸಲಹೆಗಾರ, ಇಸ್ರೇಲ್‌ನ ಮೇಲೆ ಪ್ಯಾಲಿಸ್ತೇನಿಯನ್ನರ ದಾಳಿಯನ್ನು ಇರಾನ್ ಬೆಂಬಲಿಸುತ್ತದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇದರ ನಡುವೆ ಹಮಾಸ್‌ನ ದಾಳಿಯಲ್ಲಿ ಈವರೆಗೂ 22 ಇಸ್ರೇಲ್ ಪ್ರಜೆಗಳು ಸಾವು ಕಂಡಿದ್ದಾರೆ.