ಗುಲಾಮ ಮನಸ್ಥಿತಿಯ ಜನರಿಂದ ಧರ್ಮ, ಸಂಸ್ಕೃತಿ, ತತ್ವಗಳ ಮೇಲೆ ದಾಳಿ: ಪ್ರಧಾನಿ ಮೋದಿ ತರಾಟೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಹಾ ಕುಂಭಮೇಳದ ಟೀಕಾಕಾರರನ್ನು ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ.

ದೇಶವನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ವಿದೇಶಿ ಶಕ್ತಿಗಳು ಇವರಿಗೆ ಬೆಂಬಲ ನೀಡುತ್ತಿವೆ. ಇವರದು ಗುಲಾಮಗಿರಿ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಧರ್ಮವನ್ನು ಅಪಹಾಸ್ಯ ಮಾಡುವ, ಜನರನ್ನು ವಿಭಜಿಸುವಲ್ಲಿ ತೊಡಗಿರುವ ನಾಯಕರ ಗುಂಪೊಂದು ಇರುವುದನ್ನು ನಾವು ನೋಡುತ್ತಿದ್ದೇವೆ. ಅನೇಕ ಬಾರಿ ವಿದೇಶಿ ಶಕ್ತಿಗಳು ಈ ಜನರನ್ನು ಬೆಂಬಲಿಸುವ ಮೂಲಕ ದೇಶ ಮತ್ತು ಧರ್ಮವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಂಬಿಕೆಯನ್ನು ದ್ವೇಷಿಸುವ ಜನರು ಶತಮಾನಗಳಿಂದ ಒಂದಲ್ಲ ಒಂದು ಹಂತದಲ್ಲಿ ಬದುಕುತ್ತಿದ್ದಾರೆ. ಗುಲಾಮ ಮನಸ್ಥಿತಿಗೆ ಬಿದ್ದ ಜನರು ನಮ್ಮ ನಂಬಿಕೆಗಳು, ದೇವಾಲಯಗಳು, ನಮ್ಮ ಧರ್ಮ, ಸಂಸ್ಕೃತಿ ಮತ್ತು ತತ್ವಗಳ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ಜನರು ಹಬ್ಬಗಳು, ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಪ್ರಗತಿಪರವಾದ ಧರ್ಮ ಮತ್ತು ಸಂಸ್ಕೃತಿಯ ಮೇಲೆ ದಾಳಿ ಮಾಡಲು ಅವರು ಧೈರ್ಯ ಮಾಡುತ್ತಾರೆ. ನಮ್ಮ ಸಮಾಜವನ್ನು ವಿಭಜಿಸುವುದು ಮತ್ತು ಅದರ ಏಕತೆಯನ್ನು ಮುರಿಯುವುದು ಅವರ ಕಾರ್ಯಸೂಚಿಯಾಗಿದೆ ಎಂದು ಟೀಕಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!