ಕೋರ್ಟ್ ಗೆ ಸಾಕ್ಷಿ ಹೇಳಲು ಬಂದವರ ಮೇಲೆ ಹಲ್ಲೆ: ಇಬ್ಬರಿಗೆ ಗಾಯ

ಹೊಸದಿಗಂತ ವರದಿ, ಚನ್ನರಾಯಪಟ್ಟಣ:

ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ಬಂದ ಕುಟುಂಬದವರ ಮೇಲೆ ದುಷ್ಕರ್ಮಿಗಳು ಸಿನಿಮಾ ಶೈಲಿಯಲ್ಲಿ ಹಲ್ಲೆ ಮಾಡಿರುವ ಘಟನೆ ಪಟ್ಟಣದ ನ್ಯಾಯಾಲಯದ ಮುಂಭಾಗ ಸೋಮವಾರ ನಡೆದಿದೆ.

ತಾಲೂಕಿನ ಹಿರಿಸಾವೆ ಹೋಬಳಿ ಅಂಕನಹಳ್ಳಿ ಗ್ರಾಮದಿಂದ ಪ್ರಕರಣವೊಂದರ ಸಂಬoಧ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದು, ಆರೋಪಿಯನ್ನು ದಿನೇಶ್ ಎಂದು ಗುರುತಿಸಲಾಗಿದೆ. ಜೆಎಂಎಫ್‌ಸಿ ನ್ಯಾಯಾಲಯದ ಮುಂಭಾಗ ಈ ಘಟನೆ ನಡೆದಿದೆ.

ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ವೆಂಕಟೇಶ್ ಮತ್ತು ಅವರ ದಾಯಾದಿಗಳ ನಡುವೆ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿತ್ತು. ಅಂತೆಯೇ ಜಮೀನು ವ್ಯಾಜ್ಯದ ಕೇಸ್‌ಗೆ ಸಂಬಮಧಿಸಿದoತೆ ಕುಟುಂಬದವರೆಲ್ಲರೂ ಹಾಜರಾಗುವಂತೆ ನ್ಯಾಯಾಧೀಶರು ನೀಡಿದ್ದ ಆದೇಶದಂತೆ ಎಲ್ಲರೂ ಬಂದಿದ್ದರು. ಅದರಂತೆ ವೆಂಕಟೇಶ್, ಆತನ ಭಾವ ಮಂಜುನಾಥ್, ಅಕ್ಕ ಮಧುಕುಮಾರಿ, ಪತ್ನಿ ರಮ್ಯ ಸೇರಿದಂತೆ ೭ ತಿಂಗಳ ಹಸುಗೂಸಿನೊಂದಿಗೆ, ತಮ್ಮ ಕಾರಿನಲ್ಲಿ ಬಂದಿದ್ದರು.

ನ್ಯಾಯಾಲಯದ ಮುಂಭಾಗ ಕಾರ್ ನಿಲ್ಲಿಸಿ ಕೆಳಕ್ಕೆ ಇಳಿಯುವ ವೇಳೆಗೆ ಸಿನಿಮಿಯ ರೀತಿಯಲ್ಲಿ ಅಲ್ಲಿಗೆ ಬಂದ ಅಪರಿಚತ ವ್ಯಕ್ತಿಗಳು ಏಕಾಏಕಿ ಮಾರಾಕಾಸ್ತ್ರಗಳಿಂದ ಕುಟುಂಬಸ್ಥರ ಮೇಲೆ ದಾಳಿ ನಡೆಸಿದರು. ಪರಿಣಾಮ ವೆಂಕಟೇಶ್, ಮಂಜುನಾಥ್ ಎಂಬುವರಿಗೆ ಪರಾರಿಯಾಗಲು ಯತ್ನಿಸಿದರು. ಆ ವೇಳೆ ಸ್ಥಳೀಯರು ಆರೋಪಿಗಳನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದರು. ಆರಪಿಗಳಾದ ಪಟ್ಟಣದ ದಿನೇಶ್, ಚೇತನ್, ಬೆಂಗಳೂರು ಮೂಲದ ಪ್ರಕಾಶ್ ಪೊಲೀಸರ ಪಶದಲ್ಲಿದ್ದಾರೆ. ಗಾಯಾಳು ಮಂಜುನಾಥ್ ಮತ್ತು ವೆಂಕಟೇಶ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!