ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಹಿಂದೂ ಮಹಾಸಾಗರದದಲ್ಲಿ ಇರಾನ್ ಯುದ್ಧನೌಕೆ ಐಆರ್‌ಐಎಸ್ ದೇನಾ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ರಾನ್‌ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಚಿ ಖಂಡಿಸಿದ್ದಾರೆ.
ಈ ಹಡಗು ತಾಲೀಮು ನಡೆಸುವ ಸಲುವಾಗಿ ಭಾರತೀಯ ನೌಕಾಪಡೆಗೆ ಭೇಟಿ ನೀಡುತ್ತಿತ್ತು. ಇದರಲ್ಲಿ ಸುಮಾರು 130 ನಾವಿಕರಿದ್ದರು. ಇದರ ಮೇಲೆ ಯುಎಸ್ ಸೇನಾ ಪದೇ ದಾಳಿ ನಡೆಸಿರುವುದಕ್ಕೆ ವಾಷಿಂಗ್ಟನ್ ತೀವ್ರ ವಿಷಾದ ವ್ಯಕ್ತಪಡಿಸಲಿದೆ ಎಂದು ಎಚ್ಚರಿಸಿದ್ದಾರೆ.
ಅಮೆರಿಕದ ಜಲಾಂತರ್ಗಾಮಿ ನೌಕೆಯು ಇರಾನಿನ ಯುದ್ಧನೌಕೆ ಐಆರ್‌ಐಎಸ್ ದೇನಾದ ಮೇಲೆ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಅರಾಗ್ಚಿ, ಅಂತಾರಾಷ್ಟ್ರೀಯ ಜಲ ಭಾಗದಲ್ಲಿ ಇರಾನ್ ಯುದ್ಧನೌಕೆ ಐಆರ್‌ಐಎಸ್ ದೇನಾ ಮೇಲೆ ಅಮೆರಿಕ ದಾಳಿ ನಡೆಸಿದೆ. ಇರಾನ್‌ನ ತೀರದಿಂದ ಬಹು ದೂರವಿದ್ದ ಈ ಹಡಗಿಗೆ ದಾಳಿ ನಡೆಸುವ ಮುನ್ನ ಯಾವುದೇ ಎಚ್ಚರಿಕೆಯನ್ನು ಕೂಡ ನೀಡಿಲ್ಲ ಎಂದು ಹೇಳಿದ್ದಾರೆ.
ಐಆರ್‌ಐಎಸ್ ದೇನಾದಲ್ಲಿದ್ದ ಸುಮಾರು 80 ಜನರು ಸಾವನ್ನಪ್ಪಿದ್ದಾರೆ. ಶ್ರೀಲಂಕಾ ನೌಕಾಪಡೆಯು ಸುಮಾರು 30 ನಾವಿಕರನ್ನು ರಕ್ಷಿಸಿದೆ. ಅವರನ್ನು ಚಿಕಿತ್ಸೆಗಾಗಿ ದಕ್ಷಿಣ ಬಂದರು ನಗರವಾದ ಗ್ಯಾಲೆಯಲ್ಲಿರುವ ಕರಪಿಟಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.



