ದೇವಸ್ಥಾನ, ಹಿಂದೂಗಳ ಮನೆ ಮೇಲೆ ದಾಳಿ, ಹಲ್ಲೆ: ಐದು ಮಂದಿಯ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಂಗ್ಲಾದೇಶದಲ್ಲಿ‌  ಫೇಸ್‌ಬುಕ್ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ಕ್ಷುದ್ರಗೊಂಡು ದೇವಸ್ಥಾನ, ಹಿಂದೂ ಸಮುದಾಯದವರ ಮನೆ ಮೇಲೆ‌ ದಾಳಿ,‌ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.
ಮಾಸುಮ್ ಬಿಲ್ಲಾ (32), ಎಂಡಿ ಸೈಯದ್ ಶೇಖ್ (25), ರೆಜಾಲ್ ಶೇಖ್ (40), ರಾಸೆಲ್ ಮೃಧಾ (38), ಮತ್ತು ಕಬೀರ್ ಗಾಜಿ (40) ಬಂಧಿತರು ಎಂಬ ಮಾಹಿತಿ ಲಭ್ಯವಾಗಿದೆ.
ಫೇಸ್ ಬುಕ್ ಪೋಸ್ಟ್ ಸಂಬಂಧ ನರೈಲ್‌ನ ಲೋಹಗರ ಉಪಜಿಲಾದ ದಿಘಾಲಿಯಾ ಬಜಾರ್ ಪ್ರದೇಶದಲ್ಲಿ ಶುಕ್ರವಾರ ದೇವಸ್ಥಾನವೊಂದರಲ್ಲಿ ದಾಂಧಲೆ ನಡೆಸಿದ್ದ ಈ ದುಷ್ಕರ್ಮಿಗಳು, ಬಳಿಕ ಹಿಂದೂ ಸಮುದಾಯದವರ ಮನೆ ಮತ್ತು ಅಂಗಡಿ ಮೇಲೆ ದಾಳಿ ನಡೆಸಿದ್ದರು‌ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಏಳು ದಿನಗಳ ಬಂಧನ ವಿಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!