ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಜಾತಿಗಣತಿ ವಿಷಯ ತರುವುದು ಬಿಡಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹರಿಹಾಯ್ದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೮ ವರ್ಷದ ಹಿಂದೆ ಜಾತಿ ಗಣತಿ ವಿಚಾರ ಅಧಿವೇಶನದಲ್ಲಿ ಪಕ್ಷಾತೀತವಾಗಿ ನಾವೆಲ್ಲರೂ ನಿಳುವಳಿ ಸೂಚಿಸಿದ್ದೇವು. ಆಗ ಇದೇ ಸಿದ್ದರಾಮಯ್ಯ ಅವರು ಮಂಡನೆ ಮಾಡುವುದಾಗಿ ತಿಳಿಸಿದ್ದರು ಎಂದರು.
ಬಳಿಕ ೮ ವರ್ಷ ಕಳೆದರು ಸಹ ಈ ಬಗ್ಗೆ ಪ್ರಸ್ತಾಪ ಮಾಡದೆ ಮೌನ ವಹಿಸಿದ್ದರು. ಬಳಿಕ ವರದಿ ಕಳದಿದೆ ಎಂದು ಹೇಳಿದ್ದರರು. ಈಗ ವರದಿ ಕೈಸೆರಿದ್ದು, ಸಂಚಿವ ಸಂಪುಟದಲ್ಲಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ಮುಡಾ ಹಗರಣವನ್ನು ಮರೆ ಮಾಚಲು ಮತ್ತೆ ಜಾತಿ ಗಣತಿ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಬೇಕಾ ಬಿಟ್ಟಿ ಹೇಳಿಕೆ ಬಿಟ್ಟು ವಿಧಾನ ಮಂಡಲದಲ್ಲಿ ಜಾತಿ ಗಣತಿ ವಿಚಾರವನ್ನು ಮಂಡಿಸಿ ಎಂದು ತಿಳಿಸಿದರು.
ನಾವೆಲ್ಲ ಬಿಜೆಪಿ ಕಟ್ಟಿ ಬೆಳೆಸಿದಾಗ ಬಿ.ವೈ. ವೀಜಯೇಂದ್ರ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಪಕ್ಷ ಕಟ್ಟಲು ಹಲವರು ಶ್ರಮಿಸಿದ್ದಾರೆ. ಪಕ್ಷ ಮತ್ತು ಅದರ ಶುದ್ಧೀಕರಣದ ಬಗ್ಗೆ ಮಾತನಾಡಲು ವಿಜಯೇಂದ್ರ ಇನ್ನೂ ಎಳಸು.ಹಗಲು ರಾತ್ರಿ ಪಕ್ಷ ಕಟ್ಟಿ ಬೆಳೆಸಿದವರ ವಿರುದ್ಧ ಮಾತನಾಡುವುದನ್ನು ಬಿಟ್ಟು ವರಿಷ್ಠರು ನೀಡಿದ ಜವಾಬ್ದಾರಿಯನ್ನು ನಿಭಾಯಿಸಲಿ ಎಂದು ಕುಟುಕಿದರು.
ವಿಜಯೇಂದ್ರ ರಾಜ್ಯಾಧ್ಯಕ್ಷ ಆಯ್ಕೆಯ ಸಂದರ್ಭದಲ್ಲಿ ಆರ್ ಎಸ್ ಎಸ್ ಸೇರಿ ೪೦ ಜನ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದಾಗ ೩೬ ಜನರು ಅವರನ್ನು ಮಾಡುವುದು ಬೇಡಾ ಅಂದಿದ್ದರು. ಆದರೂ ವರಿಷ್ಠರ ಕಣ್ಣಿಗೆ ಮಣ್ಣೆರಚಿ ರಾಜ್ಯಾಧ್ಯಕ್ಷ ಸ್ಥಾನ ಪಡೆದುಕೊಂಡಿರುವ ವಿಜಯೇಂದ್ರ, ನಾವು ಕಟ್ಟಿ ಬೆಳೆಸಿದ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಪ್ಪ-ಮಕ್ಕಳ ಸರ್ವಾಧಿಕಾರಿ ಧೋರಣೆ ಹಾಗೂ ಸ್ವಜನ ಪಕ್ಷಪಾತದಿಂದ ಬಿಜೆಪಿಯನ್ನು ಕಾಪಾಡಲು ಸ್ವಾತಂತ್ರ್ಯ ವಾಗಿ ಚುನಾವಣೆ ಎದುರಿಸಿದ್ದೆ. ಬಿಜೆಪಿ ಶುದ್ಧೀಕರಣ ಆಗಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಈಗ ಯಾರ ಮಾತನ್ನೂ ಕೇಳುವ ಪ್ರಶ್ನೆಯೇ ಇಲ್ಲ. ನಾನು ಹಾಗೂ ನನ್ನ ಮಗ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.