ಹೊಸ ದಿಗಂತ ವರದಿ,ಕಲಬುರಗಿ:
ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ನಗರದ ವತಿಯಿಂದ ವಿಜಯದಶಮಿ ಅಂಗವಾಗಿ ಪೂರ್ಣ ಗಣವೇಷಧಾರಿ ಸ್ವಯಂಸೇವಕರಿಂದ ಸೋಮವಾರ ಗುಣಾತ್ಮಕ ಸಂಚಲನ ಜರುಗಿತು.
ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಆರಂಭಗೊಂಡು,ಮಿನಿ ವಿಧಾನಸೌಧ, ಎಸ್.ಬಿ.ಪೆಟ್ರೋಲ್ ಪಂಪ್, ಆರ್ಚಿಡ್ ಮಾಲ್, ಎಸ್.ಎಂ.ಪಂಡಿತ್ ರಂಗಮಂದಿರ, ಜಗತ್ ವೃತ್ತದ ಮೂಲಕ ಸೂಪರ್ ಮಾರ್ಕೆಟ್,ನಲ್ಲಿ ಸಂಪನ್ನಗೊಂಡಿತು.
ವಿಜಯದಶಮಿ ಪಥ ಸಂಚಲನದ ಪೂರ್ವ ತಯಾರಿ ನಿಮಿತ್ತ ಹಮ್ಮಿಕೊಂಡಿದ್ದ ಗುಣಾತ್ಮಕ ಸಂಚಲನದಲ್ಲಿ ೬೮ ಜನ ಸ್ವಯಂಸೇವಕರು ಪೂರ್ಣ ಗಣವೇಷದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ವಿಭಾಗ ಪ್ರಚಾರಕ ವಿಜಯ್ ಮಹಾಂತೇಶ, ಶಾರೀರಿಕ ಪ್ರಮುಖ ಕಿರಣ ಬೋನಾಲ್, ಪ್ರಾಂತ ಪ್ರಚಾರ ಪ್ರಮುಖ ಕೃಷ್ಣ ಜೋಶಿ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಿರೀಶ್ ಹೆಬ್ಬಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.