ಹೊಸದಿಗಂತ ಗದಗ :
ಸ್ಥಳೀಯ ನಗರಸಭೆಯ ಮಾಲಿಕತ್ವದ ಸಾವಿರಾರು ಕೋಟಿ ರೂ ಮೌಲ್ಯದ ವಕಾರ ಸಾಲು ಆಸ್ತಿಯನ್ನು ಕಾನೂನುಬಾಹಿರವಾಗಿ ಒಪ್ಪಂದ ಮಾಡಿಕೊಂಡಿರುವ ಕುರಿತು ಪೌರಾಯುಕ್ತರಾದ ಪ್ರಶಾಂತ ವರಗಪ್ಪನವರ ಅವರು ನಗರಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರ ಮೇಲೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
೨೫-೧೦-೨೦೨೩ ರಿಂದ ೨೨-೦೭-೨೦೨೪ ರ ನಡುವಿನ ಅವಧಿಯಲ್ಲಿ ನಗರಸಭೆಯಲ್ಲಿ ಆರೋಪಿತರಾದ ೧- ವಿಜಯಲಕ್ಷ್ಮಿ ಶಿಗ್ಲಿಮಠ, ಕಾಟನ್ ಮಾರ್ಕೆಟ್ ವಕರ‍್ಸ್, ಓನರ್ಸ ಅಸೋಶಿಯೇಶನಿನ ಕಾರ್ಯದರ್ಶಿ, ೩-ನಗರಸಭೆ ಸದಸ್ಯರಾದ ಅನಿಲ್ ಅಬ್ಬಿಗೇರಿ, ೪- ನಗರಸಭೆಯ ಸದಸ್ಯ ಗೂಳಪ್ಪ ಮುಶೀಗೇರಿ, ೫-ಹಿಂದಿನ ನಗರಸಭೆ ಅಧ್ಯಕ್ಷರು ಹಾಗೂ ಇತರರು ಸೇರಿ ನಗರಸಭೆಯ ಮಾಲಿಕತ್ವದ ಸುಮಾರು ಸಾವಿರಾರು ಕೊಟಿ ಬೆಲೆ ಬಾಳುವ ೫೪ ವಕಾರುಸಾಲು ಆಸ್ತಿಯನ್ನು ಕಬಳಿಸುವ ದುರದ್ದೇಶದಿಂದ ಕಾನೂನುಬಾಹಿರವಾಗಿ ಒಪ್ಪಂದ ಮಾಡಿಕೊಂಡು ಕ್ರಮ ಸಂಖ್ಯೆ-೨ ನೇ ಆರೋಪಿತರಿಗೆ ನಗರಸಭೆಯ ಮಾಲ್ಕಿಯ ೫೪ ವಕಾರುಗಳನ್ನು ದೀರ್ಘಾವಧಿಯ ಲೀಜ್ ಕೊಡುವ ಕುರಿತು ೨೬-೧೦-೨೦೨೩ ರಂದು ನಗರಸಭೆಗೆ ಪತ್ರಕೊಟ್ಟು ನಂತರದಲ್ಲಿ ೯-೨-೨೦೨೪ ರಂದು ಜರುಗಿದ ಸಾಮಾನ್ಯ ಸಭೆಯಲ್ಲಿ ಠರಾವು ೩೭೮ ನೇದ್ದನ್ನು ಪಾಸಾಗಿದೆ ಅದರ ಪ್ರಕಾರ ೫೪ ವಕಾರ ಸಾಲ ಆಸ್ತಿಗಳನ್ನು ಎಲ್ಲ ಅನುಭೋಗದಾರರ ಕಬ್ಜಾಗೆ ನೀಡಲಾಗಿದೆ ಎಂದು ಸುಳ್ಳು ಠರಾವು ಸೃಷ್ಠಿ ಮಾಡಿದೆ.
೨೨-೭-೨೦೨೪ ರಂದು ಎಲ್ಲ ಅನುಭೋಗದಾರರಿಗೆ ಕಬ್ಜಾಗೆ ನೀಡಿದೆ ಎಂದು ಖೊಟ್ಟಿ ಪತ್ರವನ್ನು ಸೃಷ್ಠಿಸಿ ಈ ಎರಡು ದಾಖಲೆಗಳಿಗೆ ಪೌರಾಯುಕ್ತರ ನಕಲಿ ಸಹಿಯನ್ನು ಮಾಡಿ ನಗರಸಭೆಗೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಪೌರಾಯುಕ್ತರು ನಗರಸಭೆ ಹಿಂದಿನ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರ ಮೇಲೆ ಪ್ರಕರಣ ದಾಖಲಿಸಿದ್ದಾರೆ.