ಮೂರು ವರ್ಷದ ಮಗವಿನ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ

ಹೊಸ ದಿಗಂತ ವರದಿ,ಶ್ರೀರಂಗಪಟ್ಟಣ :

ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಮಾರು 55 ವರ್ಷದ ಶಿವಣ್ಣ ಎಂಬ ವ್ಯಕ್ತಿ ಮೂರು ವರ್ಷದ ಮಗುವನ್ನು ಪುಸಲಾಯಿಸಿ ತನ್ನ ಮನೆಗೆ ಕರೆತಂದು ನಗ್ನಗೊಳಿಸಿ ಅತ್ಯಾಚಾರ ಯತ್ನ ಮಾಡಿದ ಅಮಾನುಷ ಘಟನೆ ನಡೆದಿದೆ.

ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗು ಮನೆ ಹಾಗೂ ಸುತ್ತಮುತ್ತಲು ಕಾಣದಿದ್ದಾಗ ಮಗುವಿನ ತಾಯಿ ಮಗುವನ್ನು ಹುಡಕಾಟ ನಡೆಸಿದ್ದು, ಅಕ್ಕಪಕ್ಕದವರು ಹುಡಕಾಟ ನಡೆಸಿದ ಸಂದರ್ಭದಲ್ಲಿ ಮಗು ಕಿರಿಚಿದ ಶಬ್ಭದ ಕೇಳಿ ಬಂದಿದೆ. ಆರೋಪಿ ಬಾಗಿಲು ಹಾಕಿದ್ದ ಮನೆ ಒಡೆದು ಒಳ ಹೋದಾಗ ಆರೋಪಿ ಮಗುನ್ನು ನಗ್ನ ಸ್ಥಿತಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ತಕ್ಷಣ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿ ಮಗುವನ್ನು ಮೈಸೂರು ಕೆಆರ್‌ಆಸ್ಪತ್ರೆಗೆ ಕರೆ ತಂದು ಪರೀಕ್ಷೆ ಮಾಡಲಾಗುತ್ತಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿದ ಪಿಎಸ್‌ಐ ಬಸವರಾಜು ಮತ್ತು ಸಿಬ್ಬಂದಿ ಆರೋಪಿ ಶಿವಣ್ಣ(55) ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!