ಜನರಿಗೆ ಬೆದರಿಕೆ ಒಡ್ಡಿ ಹಣ ದರೋಡೆಗೆ ಯತ್ನ: ಎಂಟು ಜನರ ಬಂಧನ

ಹೊಸ ದಿಗಂತ ವರದಿ, ಮುಂಡಗೋಡ:

ತಾಲೂಕಿನ ಬಡ್ಡಿಗೇರಿಯ ಕ್ರಾಸ್ ಹತ್ತಿರ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಹಾಗೂ ಜನರನ್ನು ತಡೆದು ಅವರಿಂದ ಬೆಲೆ ಬಾಳುವ ವಸ್ತುಗಳು ಹಾಗೂ ಹಣ ದೋಚುವ ಯತ್ನದಲ್ಲಿದ್ದ ಎಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಕಿಲ್ಲೆಓಣಿಯ ಜಹೀರ್ ಶಬ್ಬೀರ್ ಶೇಖ(೩೧) ಚವಡಳ್ಳಿ ಗ್ರಾಮದ ರಫೀಕ್ ಜಮಖಂಡಿ(೩೦), ಶಾಹಿಲ್ ನಂದಿಗಟ್ಟಿ(೨೮), ಹರುಣ ಶೇಖ(೨೦), ಮಹಮ್ಮದ್ ಯುಸೂಫ್ ಗಡವಾಲೆ (೨೨), ಮಹ್ಮದಇಸ್ಮಾಯಿಲ್ ಪಾನವಾಲೆ (೨೫), ತನ್ವೀರ್ ಅಕ್ಕಿಆಲೂರು(೨೯), ದಾದಾಖಲಂದರ್ ಮಲ್ಲಿಗಾರ(೨೨) ಎಂಬವರು ಫೆ ತಮ್ಮ ಬಳಿಯಿದ್ದ ಜಿ ಜೆ.೦೩.ಡಿಜಿ. ೦೦೯೮ ನಂಬರ ಕಾರ್  ತೆಗೆದುಕೊಂಡು .

ಫೆ.೭ರಂದು ಬೆಳಗಿನ ಬಡ್ಡಿಗೇರಿ ಕ್ರಾಸ್ ಸನಿಹ ಹೋಗಿ ಕೈಯಲ್ಲಿ ಎರಡು ಕಟ್ಟಿಗೆ ಬಡಿಗೆಗಳು, ಮೂರು ಕಬ್ಬಿಣದ ರಾಡ್ ಗಳು, ಚಾಕುಗಳು,ಕಾರದಪುಡಿ ಇಟ್ಟುಕೊಂಡು ರಸ್ತೆಯಲ್ಲಿ ಬರ ಹೋಗುವ ಜನರನ್ನು ತಡೆದು ಹೆದರಿಸಿ ಅವರಿಂದ ಬೆಲೆ ಬಾಳುವ ವಸ್ತುಗಳು, ಹಣ ಸಿಕ್ಕಲ್ಲಿ ಕಸಿದುಕೊಂಡು ಹೋಗುವ ಉದ್ದೇಶದಿಂದ ದರೋಡೆ ಮಾಡುವ ಯತ್ನದಲ್ಲಿದ್ದವರನ್ನು ಪಿಎಸೈ ಪರಶುರಾಮ ಮಿರ್ಜಗಿ ಹಾಗೂ ತಂಡದವರು ಆರೋಪಿಗಳನ್ನು ಬಂಧಿಸಿದ್ದಾರೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!