ಹೊಸದಿಗಂತ ವರದಿ ಹಾಸನ:
ಹೊರ ರಾಜ್ಯದಿಂದ ಅಕ್ರಮವಾಗಿ ಗಾಂಜಾ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗಾಂಜಾ ಸಮೇತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಒರಿಸ್ಸಾ ಮೂಲದ ಸಮೀರ್ ಪ್ರಧಾನ್ (47), ಗೀತಾ ಪ್ರಧಾನ್ (25) ಬಂಧಿತ ಆರೋಪಿಗಳು.
ಜಿಲ್ಲೆಯ ಅರಕಲಗೂಡು ತಾಲ್ಲೂಕಿನ, ರಾಮನಾಥಪುರದ ಐಬಿ ವೃತ್ತದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರೆತ ತಕ್ಷಣವೇ ಕಾರ್ಯ ಪ್ರವೃತರಾದ ಪಿಎಸ್‌ಐ ಗಿರೀಶ್, ಪ್ರಹ್ಲಾದ್, ಸಿಬ್ಬಂದಿಗಳಾದ ಎಸ್. ಅಭಿಷೇಕ್, ಗಿರೀಶ್, ಮಹೇಶ್, ಸೂರ್ಯ, ಅಭಿಷೇಕ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ರಾಮನಾಥಪುರ ಪ್ರವಾಸಿ ಮಂದಿರದ ವೃತ್ತದಲ್ಲಿ ಗಾಂಜಾ ಸೊಪ್ಪು ಮಾರುತ್ತಿದ್ದ
ಇಬ್ಬರನ್ನು ಪೊಲೀಸರು ಮಾಲು ಸಮೇತ ಬಂಧಿಸಿ, 10 ಕೆಜಿಯ 600 ಗ್ರಾಂ ತೂಕದಷ್ಟು ಗಾಂಜಾ ವಶಕ್ಕೆ ಪಡೆದು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.