ನೇಪಾಳದ ಮೂಲಕ ಭಾರತಕ್ಕೆ ನುಸುಳಲು ಯತ್ನ: ಇಬ್ಬರು ಚೀನೀ ಪ್ರಜೆಗಳ ಬಂಧನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಿಹಾರದಲ್ಲಿ ನೇಪಾಳದ ಮೂಲಕ ಭಾರತದ ಭೂಪ್ರದೇಶಕ್ಕೆ ನುಸುಳಿರುವುದನ್ನು ಗಮನಿಸಿದ ವಲಸೆ ಅಧಿಕಾರಿಗಳು ಇಬ್ಬರು ಚೀನೀ ಪ್ರಜೆಗಳನ್ನು ಬಂಧಿಸಿದ್ದಾರೆ.

ಪೂರ್ವ ಚಂಪಾರಣ್ ಜಿಲ್ಲೆಯ ರಕ್ಸಾಲ್ ಗಡಿ ಹೊರಠಾಣೆಯಲ್ಲಿ ಶನಿವಾರ ರಾತ್ರಿ ಇಬ್ಬರನ್ನು ಬಂಧಿಸಲಾಯಿತು ಎಂದು ಸಹಾಯಕ ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿ ಎಸ್ಕೆ ಸಿಂಗ್ ತಿಳಿಸಿದ್ದಾರೆ.

ತಮ್ಮ ಹೆಸರು ಝಾವೋ ಜಿಂಗ್ ಮತ್ತು ಫೂ ಕಾಂಗ್ ಎಂದು ಹೇಳಿದ್ದು, ಅವರಿಬ್ಬರೂ ಚೀನಾದ ಜಾಕ್ಸಿಂಗ್ ಪ್ರಾಂತ್ಯದಿಂದ ಬಂದವರಾಗಿದ್ದಾರೆ. ಅವರ ಬಳಿ ಯಾವುದೇ ಮಾನ್ಯವಾದ ಪ್ರಯಾಣ ದಾಖಲೆಗಳು ಇರಲಿಲ್ಲ. ಹಿಂದಿನ ರಾತ್ರಿ ಅವರು ತಂಗಿದ್ದ ಹೋಟೆಲ್ನಲ್ಲಿ ತಮ್ಮ ಪಾಸ್ಪೋರ್ಟ್ಗಳನ್ನು ಬಿಟ್ಟು ಬಂದಿರುವುದಾಗಿ ಹೇಳಿದ್ದಾರೆ .

ಜುಲೈ 2 ರಂದು ಸಹ ಚೀನಾ ಪ್ರಜೆಗಳು ಭಾರತೀಯ ಭೂ ಪ್ರದೇಶಕ್ಕೆ ನುಸುಳಲು ಪ್ರಯತ್ನಿಸಿದರು. ಆದರೆ, ಪ್ರವೇಶ ನಿರಾಕರಿಸಿ ಹಿಂದೆ ಕಳುಹಿಸಲಾಗಿತ್ತು. ಆದಾಗ್ಯೂ, ಪದೇ ಪದೇ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಅನುಮಾನಗಳನ್ನು ಹುಟ್ಟುಹಾಕುತ್ತದೆ. ಆದ್ದರಿಂದ ಹೆಚ್ಚಿನ ತನಿಖೆ ಮತ್ತು ಕ್ರಮಕ್ಕಾಗಿ ಅವರನ್ನು ಬಂಧಿಸಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!