ಹೊಸದಿಗಂತ ಹುಬ್ಬಳ್ಳಿ:
ಡಕಾಯಿತಿ ಗ್ಯಾಂಗ್ ಸೆರೆ ಹಿಡಿಯಲು ಸ್ಥಳಕ್ಕೆ ಹೋದಾಗ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹೊಡೆದ ಘಟನೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಕರನೋಲ್ ಜಿಲ್ಲೆ ಡಕಾಯಿತಿ ಗ್ಯಾಂಗ್ ಸದಸ್ಯ ಪಾಲ್ ವೆಂಕಟೇಶ್ವ ರಾವ್(ಅಲಿಯಾಸ್ ಕಲ್ಯಾಣಕುಮಾರ) ಬಂತ ಆರೋಪಿ. ಆರೋಪಿ ಹಾಗೂ ವಿದ್ಯಾಗಿರಿ ಸಬ್ ಇನ್ಸಪೆಕ್ಟರ್ ಪ್ರಮೋದ ಹಾಗೂ ಸಿಬ್ಬಂದಿ ಆನಂದ ಬಡಿಗೇರ ಗಾಯಗಾಳಾಗಿದ್ದು, ನಗರದ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣವೇನು?: ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ನವಲೂರ ಗ್ರಾಮ ಹೊರವಲಯದಲ್ಲಿರುವ ವಿಕಾಸ ಕುಮಾರ ಎಂಬುವರ ಮನೆ ಬಾಗಿಲು ರಾತ್ರಿ ೩ ಗಂಟೆಯ ಸುಮಾರಿಗೆ ದೊಡ್ಡ ಕಲ್ಲಿನಿಂದ ಒಡೆದ ಐವರು ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ ವಸ್ತುಗಳನ್ನು ಕಳವು ಮಾಡಲು ಯತ್ನಿಸಿದ್ದಾರೆ.
ಆಗ ಮನೆಯ ಸಿಬ್ಬಂದಿ ಪೊಲೀಸರಿಗೆ ಹಾಗೂ ಸಂಬಂಕರಿಗೆ ಮಾಹಿತಿ ನೀಡಿದ್ದರು. ತಕ್ಷಣ ವಿದ್ಯಾಗಿರಿ ಪೊಲೀಸರು ಹಾಗೂ ರಾತ್ರಿಗಸ್ತು ಪೊಲೀಸರು ಕಾರ್ಯಪ್ರವೃತರಾಗಿ ಸ್ಥಳಕ್ಕೆ ಭೇಟಿ ನೀಡಿ ಪಾಲ ವೆಂಕಟೇಶ್ವರಾವ್ ಆತನನ್ನು ಬಂಸಿದ್ದಾರೆ. ಇತನ ವಿಚಾರಣೆ ನಡೆಸಿದಾಗ ನವಲೂರ ಕೈಗಾರಿಕಾ ಪ್ರದೇಶದಲ್ಲಿ ತಪ್ಪಿಸಿಕೊಂಡು ಉಳಿದ ಡಕಾಯಿತಿ ಗ್ಯಾಂಗ್ ಸದಸ್ಯರು ಅಲ್ಲಿ ಸೇರುವುದಾಗಿ ಯೋಜನೆ ರೂಪಿಸಿರುವುದು ಪೊಲೀಸ್ ಮುಂದೆ ಬಾಯಿ ಬಿಟ್ಟಿದ್ದರು. ಪಿಎಸ್‌ಐ ಪ್ರಮೋದ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಉಳಿದ ಆರೋಪಗಳ ಬಂಧನಕ್ಕೆ ಬಲೆ ಬಿಸಿದೆ. ಆಗ ಆರೋಪಿ ಪಾಲ ವೆಂಕಟೇಶ್ವರಾವ್ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಪಿಎಸ್‌ಐ ಪ್ರಮೋದ ಗಾಳಿಯಲ್ಲಿ ಒಂದು ಗುಂಡು ಹೊಡೆದಿದ್ದು, ಇದಕ್ಕೂ ಸ್ಪಂದಿಸದಿದ್ದಾಗ ಎರಡು ಗುಂಡು ಕಾಲಿಗೆ ಹೊಡೆದಿದ್ದಾರೆ.
ಜೂನ್ ೬ ರಂದು ಧಾರವಾಡ ನಿವಾಸಿ ಅಶೋಕ ಕದಂ ಎಂಬುವರ ಮನೆಯ ಮೇಲೆ ದಾಳಿ ನಡೆಸಿ ಇದೇ ರೀತಿ ಮನೆಯವರ ಮೇಲೆ ಹಲ್ಲೆ ಮಾಡಿ ಕಳವು ಮಾಡಿರುವುದು ತಿಳಿದು ಬಂದಿದೆ. ಆ ಪ್ರಕರಣದಲ್ಲಿ ಇದೇ ಪಾಲ ವೆಂಕಟೇಶ್ವರಾವ್ ಭಾಗಿಯಾಗಿರುವುದು ಗೊತ್ತಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದ್ದಾರೆ.
ಇದು ಆಂಧ್ರಪ್ರದೇಶದ ಕರನೋಲ್‌ನ ಡಕಾಯಿತಿ ಗ್ಯಾಂಗ್ ಆಗಿದ್ದು, ತಲತಲಾಂತರದಿಂದ ಇದೇ ಕೆಲಸ ಮಾಡಿಕೊಂಡು ಬಂದಿದ್ದಾರೆ. ರಾಯಚೂರ, ಚಿಕ್ಕಬಳ್ಳಾಪೂರ, ಮಂಡ್ಯ ಸೇರಿದಂತೆ ದಕ್ಷಿಣ ಭಾರತ ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ, ತಮಿಳು ನಾಡು ರಾಜ್ಯದಲ್ಲಿ ಇವರ ಮೇಲೆ ಡಕಾಯಿತಿ ಪ್ರಕರಣ ದಾಖಲಾಗಿವೆ. ಇದು ದೊಡ್ಡ ಡಕಾಯಿತಿ ಗ್ಯಾಂಗ್ ಆಗಿದೆ. ಧಾರವಾಡ ನಡೆದ ಎರಡು ಪ್ರಕರಣದಲ್ಲಿ ಐದವರು ಭಾಗಿಯಾಗಿರುವುದು ಗೊತ್ತಾಗಿದ್ದು, ಉಳಿದವರ ಶೋಧ ನಡೆಸಲಾಗುವುದು ಎಂದು ತಿಳಿಸಿದರು.
ಗ್ಯಾಂಗ್ ಕ್ರೌರ್ಯ ಸಿಸಿಟಿವಿಯಲ್ಲಿ ಸೆರೆ: ಜೂ. ೬ ರಂದು ಧಾರವಾಡ ಅಶೋಕ ಕದಂ ಎಂಬುವರ ಮನೆಯ ಮೇಲೆ ದಾಳಿ ನಡೆಸಿ ಕ್ರೌರ್ಯ ಮೆರೆದ ದ ದೃಶ್ಯಗಳು ಸಿಸಿಟಿವಿ ಕ್ಯಾಮರ್‌ದಲ್ಲಿ ಸೆರೆಯಾಗಿವೆ. ಚಡ್ಡಿಯಲ್ಲಿ ಬಂದ ಐವರಲ್ಲಿ ಒಬ್ಬಾತ ದೊಡ್ಡ ಕಲ್ಲನ್ನು ಹಿಡಿದು ಮನೆ ಬಾಗಿಲಿಗೆ ಎರಡು ಮೂರು ಬಾರಿ ಎಸೆದಿದ್ದಾನೆ. ಬಳಿಕ ಒಳ ಪ್ರವೇಶಿಸಿ ಮನೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಅವರ ಮೈಮೇಲಿದ್ದ ಬಟ್ಟೆಯನ್ನು ಕಳಚಿ ಮನೆಯಲ್ಲಿದ್ದ ವಸ್ತುಗಳು ಡಕಾಯಿತಿ ಮಾಡಿಕೊಂಡು ಪರಾರಿಯಾಗಿರುವ ಸಿಸಿಟಿವಿ ಕ್ಯಾಮರ್ ದೃಶ್ಯಗಳು ದೊರೆತಿವೆ.