ಕಸ್ಟಡಿಯಿಂದ ಎಸ್ಕೇಪ್ ಆಗಲು ಯತ್ನ: ಕೈ-ಕಾಲು ಕಟ್ಟಿ ಎಳೆದೊಯ್ದ ಮಹಿಳಾ ಪೊಲೀಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಮಹಿಳಾ ಪೊಲೀಸರು ಸೆರೆಹಿಡಿದು ಕೈ-ಕಾಲು ಕಟ್ಟಿ ರಸ್ತೆಯ ಮಧ್ಯೆ ಎಳೆದುಕೊಂಡು ಬಂದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಈ ಘಟನೆ ಜಾರ್ಖಂಡ್ ನಲ್ಲಿ ನಡೆದಿದ್ದು , ಮೊಬೈಲ್​ ಕಳ್ಳತನ ಮಾಡಿದ್ದ ಆರೋಪದಡಿ ಪೊಲೀಸರು ಮಹಿಳೆ ಮತ್ತು ಆಕೆಯ ಪತಿಯನ್ನು ಬಂಧಿಸಿದ್ದರು. ಕಸ್ಟಡಿಯಲ್ಲಿದ್ದ ಮಹಿಳಾ ಆರೋಪಿ​ ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಇದನ್ನು ಅರಿತ ಬೆನ್ನಲ್ಲೇ ಬೊಕಾರೊ ಪೊಲೀಸ್‌ ಠಾಣೆಯ ಲೇಡಿ ಪೊಲೀಸರು ಆಕೆಯನ್ನು ಚೇಸ್​ ಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

https://twitter.com/sohansingh05/status/1715576449539961256?ref_src=twsrc%5Etfw%7Ctwcamp%5Etweetembed%7Ctwterm%5E1715576449539961256%7Ctwgr%5E489293c06949608f4e6598addd0c7578afa03cab%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fnews%3Fmode%3Dpwaaction%3Dclick

ಆರೋಪಿಯ ಕೈ ಮತ್ತು ಕಾಲನ್ನು ಕಟ್ಟಿದ ಪೊಲೀಸರು, ಆಕೆಯನ್ನು ರಸ್ತೆಯ ಮಧ್ಯೆ ಎಳೆದೊಯ್ದ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!