ಬೆಂಗಳೂರಿಗರ ಗಮನಕ್ಕೆ: ಇನ್ಮುಂದೆ ಕಸಕ್ಕೂ ಸೇವಾ ಶುಲ್ಕ ಕಡ್ಡಾಯ, ಯಾವಾಗಿಂದ ಜಾರಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿಗರ ಗಮನಕ್ಕೆ, ಇನ್ಮುಂದೆ ಕಸಕ್ಕೂ ಸೇವಾ ಶುಲ್ಕ ಪಾವತಿಸಬೇಕು. ಇದೇ ಏಪ್ರಿಲ್‌ 1 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಅವರು, ಇದು ತೆರಿಗೆ ಅಲ್ಲ. ಇದು ಸರ್ವಿಸ್ ಚಾರ್ಜ್, ಪ್ರಾಪಾರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು, ಪ್ರತಿ ಮನೆ ಮನೆಗೆ ಹೋಗಿ ಸಂಗ್ರಹಿಸಲು ಸಾಧ್ಯವಿಲ್ಲ. ಹೀಗಾಗಿ ಸರ್ವಿಸ್‌ ಚಾರ್ಜ್‌ ಹಾಕಲಾಗುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!