ದೇಶವಾಸಿಗಳೇ ಗಮನಿಸಿ….2024ರಲ್ಲಿ ಯುಪಿಐ ಪಾವತಿಯಲ್ಲಿ 6 ಹೊಸ ನಿಯಮಗಳ ಸೇರ್ಪಡೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
 
2024ರಲ್ಲಿ ಯುಪಿಐ ಪಾವತಿಗೆ ಸಂಬಂಧಿಸಿದ ಕೆಲವು ನಿಯಮಗಳು ಬದಲಾಗಲಿವೆ. ಯುಪಿಐ ಇಂದು ನಮ್ಮ ದೈನಂದಿನ ವಹಿವಾಟಿನ ಬಹುಮುಖ್ಯ ಭಾಗವಾಗಿರುವ ಕಾರಣ ಇದರಲ್ಲಿನ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. 2024ರಿಂದ ಯುಪಿಐ ಪಾವತಿಯಲ್ಲಿನ ಈ 6 ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ.

ಯುಪಿಐ ಈ 6 ನಿಯಮಗಳಲ್ಲಿ ಬದಲಾವಣೆ
1. ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಕಾರ್ಯನಿರ್ವಹಿಸದ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸುವಂತೆ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಮುಂತಾದ ಪಾವತಿ ಅಪ್ಲಿಕೇಷನ್ ಗಳಿಗೆ ರಾಷ್ಟ್ರೀಯ ಪಾವತಿಗಳ ನಿಗಮ ನಿರ್ದೇಶನ ನೀಡಿದೆ. 2024ರ ಜನವರಿ 1 ರಿಂದ ಇಂಥ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸುವಂತೆ ಎನ್ ಪಿಸಿಐ ಸೂಚಿಸಿದೆ.

2.ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಪಾವತಿಸಲು ಯುಪಿಐ ವಹಿವಾಟಿನ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈಗಿರುವ 1ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಏರಿಕೆ ಮಾಡಿದೆ.

3.ಬೇಟಾ ಫೇಸ್ ಅಡಿಯಲ್ಲಿ ‘ಸೆಕೆಂಡರಿ ಮಾರುಕಟ್ಟೆಗೆ ಯುಪಿಐ’ ಪರಿಚಯಿಸಲು ಎನ್ ಪಿಸಿಐ ಘೋಷಣೆ ಮಾಡಿತ್ತು.

4. ದೇಶದಲ್ಲಿ ಹೆಚ್ಚುತ್ತಿರುವ ಆನ್ ಲೈನ್ ವಂಚನೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಮೊದಲ ಬಾರಿಗೆ ಇಬ್ಬರು ವ್ಯಕ್ತಿಗಳ ನಡುವೆ ಯುಪಿಐ ವಹಿವಾಟು ನಡೆಯುವಾಗ ನಿರ್ದಿಷ್ಟ ಮೊತ್ತಕ್ಕೆ ಹೆಚ್ಚಿನದಕ್ಕೆ ಕನಿಷ್ಠ ಸಮಯ ಮಿತಿ ವಿಧಿಸಲು ಸರ್ಕಾರ ಯೋಜನೆ ರೂಪಿಸಿದೆ. 2 ಸಾವಿರ ರೂ. ಮೀರಿದ ಮೊತ್ತವನ್ನು ಮೊದಲ ಬಾರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಬಳಸಿ ವರ್ಗಾವಣೆ ಮಾಡುವಾಗ 4 ಗಂಟೆಗಳ ಸಮಯಾವಧಿ ನಿಗದಿಪಡಿಸುವ ಬಗ್ಗೆ ಯೋಚಿಸಲಾಗಿದೆ.

5.ಆರ್ ಬಿಐ ದೇಶಾದ್ಯಂತ ಯುಪಿಐ ಎಟಿಎಂಗಳನ್ನು ಅಳವಡಿಸಲು ಯೋಜನೆ ರೂಪಿಸಿದೆ. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಗದು ವಿತ್ ಡ್ರಾ ಮಾಡುವ ಸೌಲಭ್ಯ ಪರಿಚಯಿಸಲು ಯೋಚಿಸಿದೆ.

ಯುಪಿಐ-ಎಟಿಎಂ ಸೇವೆಯನ್ನು ಇಂಟರ್ ಆಪರೇಬಲ್ ಕಾರ್ಡ್ ರಹಿತ ನಗದು ವಿತ್ ಡ್ರಾವಲ್ (ICCW) ಎಂದು ಕರೆಯಲಾಗುತ್ತದೆ. ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮದ (ಎನ್ ಪಿಸಿಐ) ಸಹಭಾಗಿತ್ವದಲ್ಲಿ ಹಿಟ್ಯಾಚಿ ಪೇಮೆಂಟ್ ಸರ್ವೀಸ್ ಭಾರತದ ಮೊದಲ ಯುಪಿಐ-ಎಟಿಎಂ ಅನ್ನು ಸೆಪ್ಟೆಂಬರ್ 5ರಂದು ಬಿಡುಗಡೆಗೊಳಿಸಿತ್ತು. ಈ ಯಂತ್ರದ ಮೂಲಕ ನಿರ್ದಿಷ್ಟ ಬ್ಯಾಂಕ್ ಗಳ ಗ್ರಾಹಕರು ‘ಕ್ಯುಆರ್ ಆಧಾರಿತ ನಗದುರಹಿತ ವಿತ್ ಡ್ರಾ’ ಕೂಡ ಮಾಡಬಹುದಾಗಿದೆ.

6.Hello UPI ಸೇವೆ. ಇದು ಧ್ವನಿ ಆಧಾರಿತ ಯುಪಿಐ ಹಣ ವರ್ಗಾವಣೆ ಸೌಲಭ್ಯವಾಗಿದ್ದು, ಮೊಬೈಲ್ ಸೇರಿದಂತೆ ಡಿಜಿಟಲ್ ಬಳಕೆ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿಲ್ಲದವರಿಗೆ ಹಾಗೂ ಹಿರಿಯ ನಾಗರಿಕರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದ. ಇದರ ಮೂಲಕ ಬಳಕೆದಾರರು ಬರಹ (ಟೆಕ್ಸ್ಟ್ ) ಆಧಾರಿತ ಇನ್ ಪುಟ್ ಬದಲು ಧ್ವನಿ ಬಳಸಿ ಕಮಾಂಡ್ ಗಳನ್ನು ನೀಡುವ ಮೂಲಕ ಹಣವನ್ನು ಶೀಘ್ರದಲ್ಲಿ ವರ್ಗಾಯಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here