ಶ್ವಾನಪ್ರಿಯರೇ ಗಮನಿಸಿ, ಮನೆಯಲ್ಲಿ ನಾಯಿ ಸಾಕಲು ಈ ರೂಲ್ಸ್ ಫಾಲೋ ಮಾಡ್ಲೇಬೇಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿರುವ ಶ್ವಾನ ಪ್ರಿಯರಿಗೆ ಬಿಬಿಎಂಪಿ ನಾಯಿ ಸಾಕಲು ನೂತನ ರೂಲ್ಸ್ ಜಾರಿಗೆ ಮುಂದಾಗಿದೆ.

ಈ ಹೊಸ ನಿಯಮಗಳನ್ನು ಬಿಬಿಎಂಪಿ ಸರ್ಕಾರದ ಮುಂದಿಟ್ಟಿದ್ದು, ಶೀಘ್ರದಲ್ಲೇ ಅನುಷ್ಠಾನವಾಗುವ ಸಾಧ್ಯತೆ ಇದೆ. ಒಬ್ಬಂಟಿ ಮನೆಗಳಲ್ಲಿ, ಶ್ವಾನಗಳ ಮೇಲಿನ ಪ್ರೀತಿಗೆ ಮನೆಯಲ್ಲಿ ಮೂರು ನಾಲ್ಕು ನಾಯಿ ಸಾಕುವವರೂ ಇದ್ದಾರೆ. ಆದರೆ ಇದಕ್ಕೆ ಸದ್ಯದಲ್ಲೇ ಕಡಿವಾಣ ಬೀಳಲಿದೆ.

ಬಿಬಿಎಂಪಿ ಹೊಸ ನಿಯಮಗಳು ಇಂತಿವೆ..

  • ನಾಯಿ ಸಾಕಣೆ, ಮಾರಾಟ ಮಾಡುವುದಾದರೆ ಲೈಸೆನ್ಸ್ ಕಡ್ಡಾಯವಾಗಿದೆ.
  • ಮನೆಯಲ್ಲಿ ಒಂದಕ್ಕಿಂತ ಹೆಚ್ಚು ನಾಯಿಯನ್ನು ಸಾಕುವಂತಿಲ್ಲ.
  • ಇನ್ನು ಸಾಕಿದ ನಾಯಿಗಳು ಮಾಲೀಕರಿಲ್ಲದೆ ಬೀದಿಯಲ್ಲಿ ತಿರುಗುವಂತಿಲ್ಲ.
  • ಮನೆಯಲ್ಲಿ ಮತ್ತು ಮಾರಾಟ ಕೇಂದ್ರಗಳಲ್ಲಿ ಶ್ವಾನಗಳಿಗೆ ರೇಬೀಸ್ ಲಸಿಕೆ ಕಡ್ಡಾಯವಾಗಿದೆ.
  • ಇನ್ನು ಪ್ರತೀ ತಿಂಗಳು ನಾಯಿಗಳ ಚೆಕಪ್ ಹಾಗೂ ಸುರಕ್ಷತೆ ದೃಷ್ಟಿಯಿಂದ ಲಸಿಕೆ ಹಾಕಿಸಬೇಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!