ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಮೊನ್ನೆಯವರೆಗೂ ಬೀದಿ ನಾಯಿಗಳು ಹಾವಳಿ ಹೆಚ್ಚಾಗಿತ್ತು, ಇದೀಗ ಬೀದಿಯಲ್ಲಿ ಓಡಾಡುವ ದನಗಳು ಸಹ ಜನರನ್ನು ಕೊಂದು ಹಾಕುತ್ತಿವೆ. ದೇಶದ ಕೆಲ ಭಾಗದಲ್ಲಿ ನಾಯಿ, ಹಸು, ಎತ್ತುಗಳ ದಾಳಿಯ ಘಟನೆಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದ ಘಟನೆಯೊಂದು ಎದೆ ಝಲ್ ಎನಿಸುವಂತಿದೆ. ಓಡಿದರೂ ಬಿಡದೆ ರಸ್ತೆಯೆಲ್ಲೆಲ್ಲಾ ಅಟ್ಟಾಡಿಸಿ ತಿವಿದು ಗಾಯಗೊಳಿಸಿದೆ.
ವಿವರಗಳಿಗೆ ಹೋದರೆ.. ಮೆಹ್ಸಾನಾ ಜಿಲ್ಲೆಯಲ್ಲಿ ಎತ್ತೊಂದು ಯುವಕನನ್ನು ಬೀದಿಗಳಲ್ಲಿ ಹಿಂಬಾಲಿಸಿ, ತನ್ನ ಕೊಂಬುಗಳಿಂದ ಹಲ್ಲೆ ನಡೆಸಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೃಶ್ಯ ಭಯ ಹುಟ್ಟಿಸುವಂತಿದೆ.
#WATCH A cow in Mehsana, #Gujarat went berserk and injured many people on the road #viralvideo #viral #Trending #TrendingNow #GujaratiNews #surat pic.twitter.com/pfJRCTeEfT
— The Blunt Times (TBT) (@BluntTbt) September 4, 2023