February 17, 2026
Tuesday, February 17, 2026
spot_img

ಲಾಂಗ್ ಡ್ರೈವ್ ಪ್ರೇಮಿಗಳೇ ಗಮನಿಸಿ: ನಿಮ್ಮ ಲಾಂಗ್ ಜರ್ನಿಗೆ ಸಾಥ್ ನೀಡುವ ಬೆಸ್ಟ್ ಕಾರುಗಳಿವು!

ನೀವು ಪ್ರಕೃತಿ ಪ್ರೇಮಿಯೇ? ವೀಕೆಂಡ್ ಬಂತು ಅಂದ್ರೆ ಸಾಕು ಸ್ಟೀರಿಂಗ್ ಹಿಡಿದು ಎಲ್ಲಾದ್ರೂ ದೂರ ಹೋಗ್ಬೇಕು ಅನ್ಸುತ್ತಾ? ಹಾಗಿದ್ರೆ ಬರಿ ಪ್ಲ್ಯಾನ್ ಮಾಡಿದ್ರೆ ಸಾಲದು, ನಿಮ್ಮ ಪ್ರಯಾಣ ಆರಾಮದಾಯಕವಾಗಿರಲು ಸರಿಯಾದ ಕಾರಿನ ಆಯ್ಕೆ ಅತೀ ಮುಖ್ಯ.

ಸುದೀರ್ಘ ಪ್ರಯಾಣಕ್ಕೆ ಕೇವಲ ಮೈಲೇಜ್ ಮಾತ್ರವಲ್ಲ, ಕಂಫರ್ಟ್, ಸೇಫ್ಟಿ ಮತ್ತು ಲಗೇಜ್ ಸ್ಪೇಸ್ ಎಲ್ಲವೂ ಮುಖ್ಯವಾಗುತ್ತದೆ. ಭಾರತದ ರಸ್ತೆಗಳಿಗೆ ಮತ್ತು ದೀರ್ಘ ಪ್ರಯಾಣಕ್ಕೆ ಹೇಳಿ ಮಾಡಿಸಿದ ಕೆಲವು ಬೆಸ್ಟ್ ಕಾರ್‌ಗಳ ಪಟ್ಟಿ ಇಲ್ಲಿದೆ:

ಟೊಯೋಟಾ ಇನ್ನೋವಾ ಹೈಕ್ರಾಸ್
ರೋಡ್ ಟ್ರಿಪ್ ಅಂದ ಕೂಡಲೇ ನೆನಪಾಗೋ ಮೊದಲ ಹೆಸರು ಇನ್ನೋವಾ. ಇದರ ಹೈಬ್ರಿಡ್ ಎಂಜಿನ್ ಮೈಲೇಜ್ ಕೂಡ ನೀಡುತ್ತದೆ ಮತ್ತು ರಾಜಗಾಂಭೀರ್ಯದ ಸವಾರಿ ನಿಮ್ಮದಾಗುತ್ತದೆ. ಫ್ಯಾಮಿಲಿ ಜೊತೆ ಹೋಗೋಕೆ ಇದಕ್ಕಿಂತ ಬೆಸ್ಟ್ ಗಾಡಿ ಇನ್ನೊಂದಿಲ್ಲ.

ಮಹೀಂದ್ರಾ XUV700
ಟೆಕ್ನಾಲಜಿ ಮತ್ತು ಪವರ್ ಬೇಕು ಅನ್ನೋರಿಗೆ ಇದು ಮೊದಲ ಆಯ್ಕೆ. ಇದರಲ್ಲಿರೋ ADAS (Advanced Driver Assistance Systems) ಫೀಚರ್ ಹೈವೇಗಳಲ್ಲಿ ಚಾಲನೆಯನ್ನು ಸುಲಭವಾಗಿಸುತ್ತದೆ. ಇದರ ಸನ್‌ರೂಫ್ ಮೂಲಕ ಹೊರಗಿನ ಪ್ರಕೃತಿಯನ್ನು ಸವಿಯುವುದೇ ಒಂದು ಚಂದ.

ಟಾಟಾ ಸಫಾರಿ
ಸೇಫ್ಟಿ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಕಿಲ್ಲ. ‘ದೇಶಿ ಬ್ರ್ಯಾಂಡ್’ ಎಂಬ ಹೆಮ್ಮೆಯ ಜೊತೆಗೆ, ಈ ಕಾರಿನ ಸಸ್ಪೆನ್ಷನ್ ಎಂತಹ ಗುಂಡಿ ಬಿದ್ದ ರಸ್ತೆಗಳನ್ನೂ ಲೀಲಾಜಾಲವಾಗಿ ದಾಟಬಲ್ಲದು. ಲಾಂಗ್ ಟ್ರಿಪ್‌ನಲ್ಲಿ ಆಯಾಸವಾಗದಂತೆ ನೋಡಿಕೊಳ್ಳುವ ಸೀಟುಗಳು ಇದರ ಪ್ಲಸ್ ಪಾಯಿಂಟ್.

ಹುಂಡೈ ಕ್ರೆಟಾ
ನೀವೇನಾದರೂ ಐದು ಜನರ ಸಣ್ಣ ಗುಂಪಿನಲ್ಲಿ ಹೋಗುತ್ತಿದ್ದರೆ ಕ್ರೆಟಾ ಬೆಸ್ಟ್. ಸಿಟಿ ರಸ್ತೆಯಲ್ಲೂ ಸುಲಭ, ಹೈವೇಯಲ್ಲೂ ಪವರ್‌ಫುಲ್. ಇದರ ವೆಂಟಿಲೇಟೆಡ್ ಸೀಟುಗಳು ಸಮ್ಮರ್ ಟ್ರಿಪ್‌ಗಳಿಗೆ ಹೇಳಿ ಮಾಡಿಸಿದಂತಿವೆ.

ಕಿಯಾ ಕ್ಯಾರೆನ್ಸ್
ಬಜೆಟ್‌ನಲ್ಲಿ ಹೆಚ್ಚು ಸ್ಪೇಸ್ ಬೇಕು ಅನ್ನೋರಿಗೆ ಇದು ಸೂಕ್ತ. ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುವವರಿಗೂ ಇಲ್ಲಿ ಸಾಕಷ್ಟು ಸ್ಥಳಾವಕಾಶವಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !