ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣ ದರ ಏರಿಕೆಯ ನಂತರ ಇಂದು ಮೆಟ್ರೋ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆ ಇದೆ.
ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಈ ಉದ್ದೇಶಕ್ಕಾಗಿ ಬಿಎಂಆರ್‌ಸಿಎಲ್ ಮತ್ತು ಫೇರ್ ಹೈಕ್ ಸಮಿತಿಯ ಪ್ರತಿನಿಧಿಗಳ ಉನ್ನತ ಮಟ್ಟದ ಸಭೆ ನಡೆಯಲಿದೆ. ಸಭೆಯಲ್ಲಿ ದರ ಹೆಚ್ಚಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಭೆಯಲ್ಲಿ ದರ ಏರಿಕೆ ಮತ್ತು ದರ ಪರಿಷ್ಕರಣೆ ದಿನಾಂಕ ಕೂಡ ಅಂತಿಮವಾಗುವ ಸಾಧ್ಯತೆ ಇದೆ.
ಕಳೆದ ಏಳು ವರ್ಷಗಳಿಂದ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿಲ್ಲ. ಇದೀಗ ಸುಂಕ ಏರಿಕೆ ಮಾಡಲು ಮುಂದಾಗಿರುವ ಬಿಎಂಆರ್ ಸಿಎಲ್ ಬೋರ್ಡ್ ಮೀಟಿಂಗ್ ನಡೆಸಿ ದರ ಏರಿಕೆ ಅಂತಿಮಗೊಳಿಸಲಿದೆ.
BMRCL ಅಧಿಕಾರಿಗಳು ಅಂತಿಮ ಹಂತವನ್ನು ತಲುಪಲು 10 ಗಂಟೆಗೆ ಫೇರ್ ಹೈಕ್ ಫಿಕ್ಸೇಶನ್ ಸಮಿತಿಯನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಪ್ರಸ್ತುತ ಸಮಿತಿಯು ದರವನ್ನು ಶೇ.40-45ರಷ್ಟು ಹೆಚ್ಚಿಸುವ ಚಿಂತನೆ ನಡೆಸಿದೆ.