‘ನಮ್ಮ ಮೆಟ್ರೋ’ ಪ್ರಯಾಣಿಕರೇ ಗಮನಿಸಿ: ಶೀಘ್ರದಲ್ಲೇ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದ್ಯದಲ್ಲೇ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯಾಗಲಿದ್ದು, ಕನಿಷ್ಠ ದರ 15 ರೂ., ಗರಿಷ್ಠ ದರ 70 ರೂ. ಆಗಲಿದೆ.

ನಮ್ಮ ಮೆಟ್ರೋ 2011 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು ಮತ್ತು 2017 ರಲ್ಲಿ ಪ್ರಯಾಣ ದರವನ್ನು ಪರಿಷ್ಕರಿಸಲಾಯಿತು. ಈಗ ಎರಡನೇ ದರ ಪರಿಷ್ಕರಣೆ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮವು ರಚಿಸಿರುವ ನಿಗದಿ ಸಮಿತಿಯು ಅಕ್ಟೋಬರ್ 28 ರವರೆಗೆ ಸಾರ್ವಜನಿಕರಿಂದ ಸಲಹೆಗಳು, ಸೂಚನೆಗಳು ಮತ್ತು ಆಕ್ಷೇಪಣೆಗಳನ್ನು ಪಡೆದುಕೊಂಡಿದೆ.

ಮೆಟ್ರೋ ರೈಲು ಕಾಯ್ದೆಯಡಿಯಲ್ಲಿ ಕೇಂದ್ರವು ರಚಿಸಿರುವ ಮೊದಲ BMRCL ದರ ನಿರ್ಣಯ ಸಮಿತಿ ಇದಾಗಿದೆ. ಪ್ರಸ್ತುತ ಕನಿಷ್ಠ ಬೆಲೆ 10 ರೂಪಾಯಿ ಮತ್ತು ಗರಿಷ್ಠ ಬೆಲೆ 60 ರೂಪಾಯಿ. ನೀವು ಸ್ಮಾರ್ಟ್ ಕಾರ್ಡ್, ಕ್ಯೂಆರ್ ಕೋಡ್ ಟಿಕೆಟ್ ಬಳಸುವವರಿಗೆ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಮೆಟ್ರೋ ಕಾರ್ಯಾಚರಣೆಗಳು, ನಿರ್ವಹಣೆ ಮತ್ತು ಉದ್ಯೋಗಿ ವೇತನಗಳಂತಹ ವಿವಿಧ ವೆಚ್ಚಗಳು ಹೆಚ್ಚಾಗುತ್ತಿವೆ. 7 ವರ್ಷಗಳವರೆಗೆ ದರದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಇದರಿಂದಾಗಿ ಕನಿಷ್ಠ ಪ್ರಯಾಣ ದರ 15 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!