ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ನಾಗಸಂದ್ರ ನಿಲ್ದಾಣದವರೆಗೆ ಇಂದು, ಸೆಪ್ಟೆಂಬರ್ 6 ಮತ್ತು 11 ರಂದು ಪೂರ್ಣ ದಿನ ಮೆಟ್ರೋ ಸೇವೆ ಸ್ಥಗಿತಗೋಂಡಿರುತ್ತದೆ.
ವಿಸ್ತರಿಸಿದ ಮಾರ್ಗದಲ್ಲಿ ಮೆಟ್ರೋ ಸಿಗ್ನಲಿಂಗ್ ಪರೀಕ್ಷೆ ಹಿನ್ನೆಲೆ ಇಡೀ ದಿನ ಸಿಗ್ನಲಿಂಗ್ ಟೆಸ್ಟಿಂಗ್ ನಡೆಯಲಿದೆ. ನೇರಳ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸಂಚಾರ ಇರುತ್ತದೆ